ಸುದಾನ ಶಾಲೆಯ ಪ್ರಾರಂಭೋತ್ಸವ

0

ಪುತ್ತೂರ: ಪುತ್ತೂರಿನ ಸುದಾನ ಶಾಲೆಯಲ್ಲಿ ಮೇ 31 ರಂದು ನೂತನ ಶೈಕ್ಷಣಿಕ ವರ್ಷ 2024-25 ರ ಪ್ರಾರಂಭೋತ್ಸವ ಆಚರಿಸಲಾಯಿತು. ದೀಪೋಜ್ವಲನೆ ಮಾಡಿ ಶುಭಾರಂಭವನ್ನು ಮಾಡಿದ ಶಾಲಾ ಸಂಚಾಲಕ ರೆ. ವಿಜಯ ಹಾರ್ವಿನ್ ರವರು ವಿದ್ಯಾಭ್ಯಾಸದ ಮಹತ್ವವನ್ನು ತಿಳಿಯಪಡಿಸಿದರು.

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ’ವಿದ್ಯಾರ್ಥಿಗಳು ತಮ್ಮ ಶಕ್ತಿಯನ್ನು ತಾವು ತಿಳಿದುಕೊಂಡು ನಂಬಿಕೆಯಿಂದ ಮುನ್ನಡೆಯ ಬೇಕು ಎಂದರು. ಶಾಲಾ ಮುಖ್ಯಶಿಕ್ಷಕಿ ಶೋಭಾ ನಾಗರಾಜ್ವಿ ದ್ಯಾರ್ಥಿಗಳನ್ನು ನೂತನ ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸುತ್ತಾ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಶ್ರೀವಿಭಾ ರವರಿಂದ ಭಾವಗೀತ ಗಾಯನವು ನಡೆಯಿತು.ವಿದ್ಯಾರ್ಥಿನಿ ಜೆನ್ನಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here