ಜೂ.8: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಶಾಖೆಯ ದಶಮಾನೋತ್ಸವ

0

ನೆಲ್ಯಾಡಿ: ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿರುವ ಮಣಾಯಿ ಆರ್ಚ್ ಕಟ್ಟಡದಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಶಾಖೆಯ ದಶಮಾನೋತ್ಸವ ಸಮಾರಂಭ ಜೂ.8ರಂದು ನಡೆಯಲಿದೆ.


ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜಕತ್ವದಲ್ಲಿ 2002ರಲ್ಲಿ ಪುತ್ತೂರಿನಲ್ಲಿ ಆರಂಭಗೊಂಡ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 4ನೇ ನೆಲ್ಯಾಡಿ ಶಾಖೆ 2014ರಲ್ಲಿ ನೆಲ್ಯಾಡಿಯ ಬೆಥಾಲ್ ಕಾಂಪ್ಲೆಕ್ಸ್‌ನಲ್ಲಿ ಆರಂಭಗೊಂಡಿತ್ತು. 2020ರಲ್ಲಿ ನೆಲ್ಯಾಡಿ ಪೇಟೆಯ ಡೆಂಜ ಕಾಂಪ್ಲೆಕ್ಸ್‌ಗೆ ಶಾಖೆ ಸ್ಥಳಾಂತರಗೊಂಡಿತ್ತು. ಇದೀಗ ಶಾಖೆಯು ಹವಾನಿಯಂತ್ರಿತ, ಗಣಕೀಕೃತ ಸೌಲಭ್ಯದೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಪ್ರಸ್ತುತ ಸಾಲಿನಲ್ಲಿ ನೆಲ್ಯಾಡಿ ಶಾಖೆಯು 47.50 ಕೋಟಿ ರೂ.ವ್ಯವಹಾರ ನಡೆಸಿದೆ. ಸದಸ್ಯರಿಂದ 10.10 ಕೋಟಿ ರೂ.ಠೇವಣಿ ಸಂಗ್ರಹಿಸಿ 10.85 ಕೋಟಿ ರೂ.ಸಾಲ ವಿತರಣೆ ಮಾಡಿದ ಸಾಧನೆ ಮಾಡಿದೆ. ನೆಲ್ಯಾಡಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರಾಗಿ ನಿರ್ದೇಶಕ ಪ್ರವೀಣ್ ಕುಂಟ್ಯಾನ, ಉಪಾಧ್ಯಕ್ಷರಾಗಿ ಸುಪ್ರಿತಾ ರವಿಚಂದ್ರ ಹಾಗೂ 10 ಮಂದಿ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.

ಜೂ.8: ಗಣಪತಿ ಹವನ, ಲಕ್ಷ್ಮೀಪೂಜೆ:
ದಶಮಾನೋತ್ಸವ ಹಾಗೂ ಶಾಖೆಯ ಪಾದಾರ್ಪಣೆ ಅಂಗವಾಗಿ ಜೂ.8ರಂದು ಬೆಳಿಗ್ಗೆ ಡೆಂಜ ಕಾಂಪ್ಲೆಕ್ಸ್‌ನಲ್ಲಿರುವ ನೆಲ್ಯಾಡಿ ಶಾಖೆ ಕಚೇರಿಯಲ್ಲಿ ಗಣಪತಿ ಹವನ, ಲಕ್ಷ್ಮೀ ಪೂಜೆ ನಡೆಯಲಿದೆ. ಬೆಳಿಗ್ಗೆ 11ರಿಂದ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಶಾಖೆಯಲ್ಲಿ ಅತ್ಯುತ್ತಮ ವ್ಯವಹಾರ ನಡೆಸಿದ ಗ್ರಾಹಕರಿಗೆ, ಸಂಘದ ವ್ಯವಹಾರ ಚಟುವಟಿಕೆಯಲ್ಲಿ ಸಹಕಾರ ನೀಡುತ್ತಿರುವವರಿಗೆ ಹಾಗೂ ಕಳೆದ 10 ವರ್ಷಗಳಲ್ಲಿ ಶಾಖೆಯಲ್ಲಿ ದುಡಿದ ಪ್ರಬಂಧಕರು, ಸಿಬ್ಬಂದಿಗಳು, ಆಡಳಿತ ಮಂಡಳಿ ಅಧ್ಯಕ್ಷರನ್ನು, ಶಾಖೆಯ ನಿರ್ದೇಶಕರನ್ನು, ಸಲಹಾ ಸಮಿತಿ ಸದಸ್ಯರನ್ನು ಗುರುತಿಸುವ ಕಾರ್ಯ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here