ಸುದಾನ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪರಿಸರ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭೂಮಿಗೆ ಗೌರವ ನಮನವನ್ನು ಸಲ್ಲಿಸಿದರು.ವಿದ್ಯಾರ್ಥಿನಿ ಖದೀಜತ್ ಅಫ್ನಾ ದಿನದ ಮಹತ್ವವನ್ನು ವಿವರಿಸುತ್ತಾ ಪರಿಸರದ ಮೇಲೆ ಮಾನವನ ದಬ್ಬಾಳಿಕೆಯಿಂದ ಆಗುವ ಪ್ರತಿಕೂಲ ಪರಿಣಾಮಗಳು ಮತ್ತು ವಾಯು, ಜಲ, ಭೂ ಮಾಲಿನ್ಯದಿಂದಾಗುವ ಭೀಕರ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.ವಿದ್ಯಾರ್ಥಿನಿ ಶ್ರೀವಿಭಾ ಪರಿಸರ ಗೀತೆಯನ್ನು ಹಾಡಿದರು. ವಿಜಯ ಕರ್ನಾಟಕ ನಡೆಸಿದ ’ನಮ್ಮ ಭೂಮಿ – ನಮ್ಮ ಭವಿಷ್ಯ’ ಚಿತ್ರ ಸ್ಪರ್ಧೆಯಲ್ಲಿ ಆಯ್ದ ವಿದ್ಯಾರ್ಥಿಗಳು ಭಾಗವಹಿಸಿದರು. ವಿದ್ಯಾರ್ಥಿಗಳು ರಚಿಸಿದ ಪರಿಸರ ಸಂಬಂಧಿ ಚಿತ್ರಗಳು ಮತ್ತು ಲೇಖನಗಳನ್ನು ಪ್ರದರ್ಶಿಸಲಾಯಿತು.


ವಿದ್ಯಾರ್ಥಿನಿ ತ್ರಯಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ವಿಜ್ಞಾನ ಸಂಘ ’ಅವನಿ’ ಕಾರ್ಯಕ್ರಮವನ್ನು ಆಯೋಜಿಸಿದ್ದು, ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್, ಸಂಯೋಜಕರು ಹಾಗೂ ಸಂಘದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here