ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದಲ್ಲಿ ಪುತ್ತೂರಿನ ಬರೆಕರೆ ವೆಂಕಟರಮಣ
ಸಭಾಭವನದಲ್ಲಿ ಬುಧವಾರ ‘ಲಯ-ಅಮೂರ್ತದಿಂದ ಮೂರ್ತದೆಡೆಗೆ’ ಸಂವಾದ ಕಾರ್ಯಕ್ರಮ ಏರ್ಪಟ್ಟಿತು.
ಮೃದಂಗ, ಮೋರ್ಚಿಂಗ್ ಕಲಾವಿದ ವಿದ್ವಾನ್ ಬಾಲಕೃಷ್ಣ ಎಚ್. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಭರತನಾಟ್ಯದಲ್ಲಿ ಲಯ ಕುರಿತು ಕಾರ್ಯಾಗಾರ ನಡೆಸಿಕೊಟ್ಟರು. ಬಳಿಕ
ವಿದ್ಯಾರ್ಥಿಗಳ ಜತೆ ಸಂವಾದ ನಡೆಯಿತು. ನೃತ್ಯೋಪಾಸನಾ ಕಲಾ ಅಕಾಡೆಮಿ ಅಧ್ಯಕ್ಷ ಪಿ.ಎಸ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕಲಾ ಅಕಾಡೆಮಿ ವಿದ್ಯಾರ್ಥಿನಿ ಪೃಥ್ವಿ ಸುಬ್ರಹ್ಮಣ್ಯ ಪ್ರಾರ್ಥಿಸಿದರು. ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಸ್ವಾಗತಿಸಿ, ವಂದಿಸಿದರು.