ಪುತ್ತೂರು: ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಸಹಕಾರ ರತ್ನ ಕೆ.ಸೀತಾರಾಮ ರೈ ಸವಣೂರು ಅವರ ಹುಟ್ಟುಹಬ್ಬ ಆಚರಣೆಯನ್ನು ಪುತ್ತೂರು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ನೌಕರರ ವತಿಯಿಂದ ಜೂ.9ರಂದು ಪ್ರಶಾಂತ್ ಮಹಲ್‌ನ ಸೆನೆಟ್ ಸಭಾಂಗಣದಲ್ಲಿ ನಡೆಯಿತು.
ಸಂಸ್ಥೆಯ ನೌಕರರು, ನಿರ್ದೆಶಕರು ಕೆ ಸೀತಾರಾಮ ರೈ ಮತ್ತು ಕಸ್ತೂರಿ ಕಲಾ ದಂಪತಿಯನ್ನು ಶಾಲು ಪೇಟ ತೊಡಿಸಿ ಗೌರವಿಸಿದರು. ಆರಂಭದಲ್ಲಿ ಸಿಬ್ಬಂದಿಗಳು ಆರತಿ ಬೆಳಗಿ ತಿಲಕವಿಟ್ಟು ಗೌರವಿಸಿದರು. ಸಮಾರಂಭದ ಕೊನೆಯಲ್ಲಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಸಂಭ್ರಮಿಸಲಾಯಿತು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಅಧ್ಯಕ್ಷತೆ ವಹಿಸಿದರು.
ಬಂಟರ ಸಂಘದ ಪೂರ್ವಾಧ್ಯಕ್ಷ ಲಕ್ಷ್ಮೀನಾರಾಯಣ ಶೆಟ್ಟಿ ಅರಿಯಡ್ಕ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಯಸ್ ಎಂ ಬಾಪು ಸಾಹೇಬ್ ಅವರು ಶುಭಶಂಸನೆ ಮಾಡಿದರು. ಈ ಸಂದರ್ಭ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.
ಕಡಬ ಶಾಖೆಯ ವಿಜಯ ಕುಮಾರ್ ರೈ, ಶ್ರೀಧರ್ ಪೂಜಾರಿ, ಕುಂಬ್ರ ಶಾಖೆಯ ವಿನುತ, ಸುಳ್ಯ ಶಾಖೆಯ ಸೀನಿಯರ್ ಮ್ಯಾನೇಜರ್ ಮನೋಜ್, ಉಜಿರೆ ಶಾಖೆಯ ವಾಣಿಶ್ರೀ ಅತಿಥಿಗಳನ್ನು ಗೌರವಿಸಿದರು. ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಪಂಜ ಶಾಖೆಯ ನಿವೃತ್ತ ಮ್ಯಾನೇಜರ್ ಪರಮೇಶ್ವರ ಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಸಂಘದ ಕೇಂದ್ರ ಕಚೇರಿಯ ಶ್ರಮಿತಾ ಕೆ ಪ್ರಾರ್ಥಿಸಿದರು.ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಮಹಾಪ್ರಬಂಧಕ ವಸಂತ ಜಾಲಾಡಿ ಸ್ವಾಗತಿಸಿದರು. ಉಪ ಮಹಾಪ್ರಬಂಧಕ ಸುನಾದ್ ರಾಜ್ ಶೆಟ್ಟಿ ವಂದಿಸಿದರು.ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.
ಸಿಬ್ಬಂದಿಗಳಿಂದ ಪ್ರೋಜೆಕ್ಟರ್ ಕೊಡುಗೆ :
ಸಿಬ್ಬಂದಿಗಳಿಂದ ವಿದ್ಯಾರಶ್ಮಿ ವಿದ್ಯಾಲಯಕ್ಕೆ ಸುಮಾರು ರೂ.40 ಸಾವಿರ ಮೌಲ್ಯದ ಪ್ರೊಜೆಕ್ಟರ್ ಅನ್ನು ಸಂಸ್ಥೆಯ ಅಧ್ತಕ್ಷ ಕೆ ಸೀತಾರಾಮ ರೈ ಅವರ ಮೂಲಕ ಕೊಡುಗೆಯಾಗಿ ನೀಡಲಾಯಿತು. ವಿದ್ಯಾರಶ್ಮಿ ವಿದ್ಯಾಲಯದ ಅಧ್ಯಕ್ಷ ಅಶ್ವಿನ್ ಎಲ್ ಶೆಟ್ಟಿ, ಪ್ರಾಂಶುಪಾಲ ನಾರಾಯಣಮೂರ್ತಿ ಅವರಿಗೆ ಸಂಘದ ಸಿಬ್ಬಂದಿಗಳು ಪ್ರೋಜೆಕ್ಟರ್ ಹಸ್ತಾಂತರಿಸಿದರು.
ಹಣ್ಣಿನ ಗಿಡ ವಿತರಣೆ:
ಸಂಸ್ಥೆಯ ಹಿರಿಯ ನಿರ್ದೇಶಕ ಚಿಕ್ಕಪ್ಪ ನಾಯಕ್, ರಾಮಯ್ಯ ರೈ ಕೆದಂಬಾಡಿ, ಸಿಬ್ಬಂದಿ ವಿನೋದ್ ಶೆಟ್ಡಿ, ಸವಣೂರು ಶಾಖೆಯ ಇಂದಿರಾ ಎಚ್ ಶೆಟ್ಟಿ ಅವರಿಗೆ ಕೆ ಸೀತಾರಾಮ ರೈ ಅವರು ಹಣ್ಣಿನ ಗಿಡ ವಿತರಿಸಿದರು.