ವಿವೇಕಾನಂದ ಕ.ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆ

0

’ಮಕ್ಕಳ ಕಲಿಕಾ ಪ್ರಕ್ರಿಯೆಯಲ್ಲಿ ಪೋಷಕರೂ ಮಕ್ಕಳಾಗಬೇಕು’- ಜಯಪ್ರಕಾಶ್-ವಕೀಲರು


ಪುತ್ತೂರು: ವಿವೇಕಾನಂದ ಕನ್ನಡ ಶಾಲೆಯ ಪ್ರಸಕ್ತ ಶೈಕ್ಷಣಿಕ ವರ್ಷ 10ನೇ ತರಗತಿಯ ಪೋಷಕರ ಸಭೆಗೆ ದೀಪಬೆಳಗಿಸಿ ಶಾಲಾ ಪೋಷಕ ಜಯಪ್ರಕಾಶ್ ಚಾಲನೆ ನೀಡಿದರು.

2024-25ರ ಶೈಕ್ಷಣಿಕ ವರ್ಷದ ಪಠ್ಯ-ಪಠ್ಯಪೂರಕ ಚಟುವಟಿಕೆಗಳ ಕಾರ್ಯಯೋಜನೆಗಳನ್ನು ಸಭೆಗೆ ತಿಳಿಸಿದ ಸಹಶಿಕ್ಷಕ ರಾಮ್ ನಾಯ್ಕ್ ಇವರು ಶಾಲಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪೋಷಕರು – ಶಿಕ್ಷಕರು ಹಾಗೂ ಮಕ್ಕಳ ಸಹಭಾಗಿತ್ವ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಪೋಷಕರೊಂದಿಗೆ ಸಂವಾದ ನಡೆಯಿತು. ಪ್ರಸಕ್ತ ವರ್ಷ 10ನೇ ತರಗತಿಗೆ ಪಾಠ ಬೋಧಿಸುವ ಶಿಕ್ಷಕರ ಪರಿಚಯವಾಯಿತು. ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ಮಕ್ಕಳ ಆಲೋಚನೆ- ಭಾವನೆ ಹಾಗೂ ವರ್ತನಾಂಶಗಳಲ್ಲಿ ಧನಾತ್ಮಕತೆಯನ್ನು ತರುವ ಶಿಕ್ಷಕ- ಪೋಷಕರ ಸಂಬಂಧವು ಶಾಲಾ ಶಕ್ತಿಯಾಗಿದೆ ಎಂದು ಹೇಳಿ ವಂದಿಸಿದರು.ಸಹಶಿಕ್ಷಕಿ ಶಾಲಿನಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here