ರೋಟರಿಯ ಅತ್ಯುನ್ನತ ಗೌರವ UNSUNG HERO ಪ್ರಶಸ್ತಿ ಪುರಸ್ಕೃತರಾದ ಹರ್ಷಕುಮಾರ ರೈ ಮಾಡಾವು

0

ಪುತ್ತೂರು: ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181 ವತಿಯಿಂದ ಹಮ್ಮಿಕೊಂಡ 2024-2025ನೇ ಸಾಲಿನ ಪ್ರಶಸ್ತಿ ಪ್ರಧಾನ ಸಮಾರಂಭ ಮೈಸೂರಿನಲ್ಲಿ ನಡೆದಿದ್ದು, ರೋಟರಿಯ ಅತ್ಯುನ್ನತ ಗೌರವ UNSUNG HERO ಪ್ರಶಸ್ತಿಯು ಡಾ ಹರ್ಷಕುಮಾರ ರೈ ಮಾಡಾವು ಇವರಿಗೆ ಲಭಿಸಿದೆ.
ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷರಾಗಿ, ವಲಯ ಸೇನಾನಿಯಾಗಿ, ರಸ್ತೆ ಸುರಕ್ಷತೆ ಮತ್ತು ಜಾಗೃತಿ ಜಿಲ್ಲಾ ಚೇರ್‌ಮ್ಯಾನ್ ಆಗಿ ರೋಟರಿಯಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಇವರು ಪ್ರಸ್ತುತ ವರ್ಷದಲ್ಲಿ ರೋಟರಿ ಜಿಲ್ಲೆಗೆ ಒಳಪಟ್ಟ ದ.ಕ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ರಸ್ತೆ ಸುರಕ್ಷತೆ ಮತ್ತು ಜಾಗೃತಿಗೆ ಸಂಬಂಧಪಟ್ಟ ಹಲವು ವಿನೂತನ ಕಾರ್ಯಕ್ರಮಗಳನ್ನು ಸಂಘಟಿಸಿ ರೋಟರಿ ಜಿಲ್ಲೆ ಮಾತ್ರವಲ್ಲ ರೋಟರಿ ಇಂಡಿಯಾದಲ್ಲಿಯೇ ಹೊಸ ದಾಖಲೆ ಮಾಡಿದ್ದರು. ಇವರು 2024-2025 ಸಾಲಿಗೆ ರೋಟರಿ ಅಸಿಸ್ಟೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್, ಪೂರ್ವ ಗವರ್ನರ್ ಪ್ರಕಾಶ್ ಕಾರಂತ್ ಮತ್ತು ಚಿತ್ರನಟಿ ಪ್ರಿಯಾಂಕ ಸೇರಿದಂತೆ ರೋಟರಿ ನಾಯಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here