ಗೋಳಿತ್ತೊಟ್ಟು: ಇಲ್ಲಿನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶತಮಾನೋತ್ಸವದ ಸವಿನೆನಪಿಗಾಗಿ ಶಾಲಾ ಶತಮಾನೋತ್ಸವ ಸಮಿತಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸಹಯೋಗದೊಂದಿಗೆ ಶಾಲಾ ಪೂರ್ವ ವಿದ್ಯಾರ್ಥಿಗಳ ಸಂಘದ ಪ್ರಾಯೋಜಕತ್ವದಲ್ಲಿ ಆಂಗ್ಲ ಮಾಧ್ಯಮ ಎಲ್.ಕೆ.ಜಿ.ಮತ್ತು ಯು.ಕೆ.ಜಿ.ತರಗತಿಗಳ ಉದ್ಘಾಟನಾ ಕಾರ್ಯಕ್ರಮವು ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ಊರಿನ ವಿದ್ಯಾಭಿಮಾನಿಗಳು ಕೊಡುಗೈ ದಾನಿಗಳ ಸಮ್ಮುಖದಲ್ಲಿ ನಡೆಯಿತು.
ಶಾಲಾ ಮುಖ್ಯ ಶಿಕ್ಷಕಿ ಜಂಯಂತಿ ಬಿ.ಎಂ. ರವರು ಸರ್ವರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೆಶ್ ಎಸ್.ಆರ್. ದೀಪ ಬೆಳಗಿಸುವ ಮೂಲಕ ನಿರ್ವಹಿಸಿ “ಗುಣ ಮಟ್ಟದ ಶಿಕ್ಷಣವನ್ನು ನೀಡುವ ಸಲುವಾಗಿ ಸರಕಾರವು ಕೆ.ಪಿ.ಎಸ್. ಹಾಗೂ ಪಿ.ಎಂ.ಶ್ರೀ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಶಿಕ್ಷಣದ ಜೊತೆಗೆ ಆಂಗ್ಲ ಭಾಷಾ ಕಲಿಕೆಗೆ ವಿಶೇಷ ಒತ್ತನ್ನು ನೀಡುತ್ತಿದ್ದು, ಅದಕ್ಕೆ ಪೂರಕವೆಂಬಂತೆ ಶತಮಾನೋತ್ಸವದ ಹೊಸ್ತಿಲಿನಲ್ಲಿರುವ ಗೋಳಿತ್ತಟ್ಟು ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗಳಿಗೆ ಚಾಲನೆ ನೀಡಲಾಗಿದ್ದು, ಇದು ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಲಿ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಳಿತ್ತೊಟ್ಟು ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ ವಹಿಸಿದ್ದರು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಗೋಪಾಲ ಗೌಡ ಕುದ್ಕೋಳಿ, ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ವೆಂಕಪ್ಪ ಗೌಡ ಡೆಬ್ಬೇಲಿ, ಶಾಲಾ ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷ ನಾಸಿರ್ ಸಮರ ಗುಂಡಿ, ಶಾಲಾ ಪೂರ್ವ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಬ್ದುಲ್ ಹಾರೀಫ್, ಶಾಲಾ ಶತಮಾನೋತ್ಸವ ಸಮಿತಿಯ ಕೋಶಾಧಿಕಾರಿ ಜನಾರ್ಧನ ಗೌಡ ಪಠೇರಿ, ಗ್ರಾಮ ಪಂಚಾಯತಿ ಸದಸ್ಯರಾದ ಕುಮಾರಿ ಗುಲಾಬಿ ಕಿನ್ಯಡ್ಕ, ಬಜತ್ತೂರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಮಂಜುನಾಥ ಕೆ.ವಿ, ಕೆ.ಪಿ.ವೆಂಕಟರಮಣ ಸುಲ್ತಾಜೆ, ಕೇಶವ ಪೂಜಾರಿ ಕಿನ್ಯಡ್ಕ, ಆಳ್ವಾಸ್ ಕಾಲೇಜು ಮೂಡಬಿದಿರೆಯ ಉಪನ್ಯಾಸಕ ಅಜಿತ್ ಕುಮಾರ್ ಪಾಲೇರಿ, ಹಾಜಿ ಕೆ.ಕೆ.ಇಸ್ಮಾಯಿಲ್ ಕೋಲ್ಪೆ, ಡಾ. ರಾಮಕೃಷ್ಣ ಭಟ್ ಅಂಜರ, ತುಕ್ರಪ್ಪ ಗೌಡ ಮರಂದೆ, ನಿವೃತ್ತ ಮುಖ್ಯ ಗುರುಗಳಾದ ಶೀನಪ್ಪ ನಾಯ್ಕ.ಎಸ್.ನೆಲ್ಯಾಡಿ, ವಿಶ್ವನಾಥ ಗೌಡ ಪೆರಣ, ಶಾಲಾ ಪೂರ್ವ ವಿದ್ಯಾರ್ಥಿ ಸಂಘದ ಖಜಾಂಜಿಗಳಾದ ಸುಂದರ ಶೆಟ್ಟಿ ಪುರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಸಹಕರಿಸಿದರು.
ಸಮಾರಂಭದಲ್ಲಿ ಎಲ್ .ಕೆ.ಜಿ ಮತ್ತು ಯು.ಕೆ.ಜಿ.ತರಗತಿಗಳಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಅಬ್ದುಲ್ ಕುಂಞ ಗೋಳಿತ್ತೊಟ್ಟು, ಬ್ಯಾಗ್ ನೀಡಿ ಸಹಕರಿಸಿದ ಶ್ರೀ ಮೊಹಮ್ಮದ್ ಹನ್ಸಿಫ್ ಗೋಳಿತ್ತೊಟ್ಟು, ಆಟಿಕೆ ವಸ್ತುಗಳನ್ನು ನೀಡಿದ ಶ್ರೀ ಅಬ್ದುಲ್ ಹಾರೀಫ್ ಮತ್ತು ಶ್ರೀ ಜಲೀಲ್, ಪ್ಲಾಸ್ಟಿಕ್ ಕುರ್ಚಿಗಳನ್ನು ನೀಡಿ ಸಹರಿಸಿದ ಶ್ರೀ ಅಬೂಸ್ವಾಲಿಹ್ ಗೋಳಿತ್ತೊಟ್ಟು, ಸಮವಸ್ತ್ರ ನೀಡಿ ಸಹಕರಿಸಿದ ರಂಶೀದ್ ಗೋಳಿತ್ತೊಟ್ಟು, ಶೂ ಮತ್ತು ಸಾಕ್ಸ್ ನೀಡಿ ಸಹಕರಿಸಿದ ಅಬ್ದುಲ್ ಲತೀಫ್ ಸಂಕದಬಳಿ, ಚಾಪೆಯನ್ನು ನೀಡಿ ಸಹಕರಿಸಿದ ಆಯಿಷಾ, ಮೈಮೂನ ಹಾಗೂ ಸಫಿಯಾ, ತರಗತಿ ಕೋಣೆಗಳಿಗೆ ಫ್ಯಾನ್ ನೀಡಿ ಸಹಕರಿಸಿದ ಕುಶಾಲಪ್ಪ ಗೌಡ ಅನಿಲ, ಸುಂದರ ಶೆಟ್ಟಿ ಪುರ, ಬೈಜು. ವಿ.ವಿ. ಹಾಗೂ ಶಾಲಾ ದಾಖಲಾತಿಯ ಬ್ಯಾನರ್ ಉಚಿತವಾಗಿ ಮಾಡಿಕೊಟ್ಟ ಎ.ಎಸ್.ಶೇಖರ ಗೌಡ ಅನಿಲರವರನ್ನು ಗುರುತಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ, ಶಾಲಾ ಶತಮಾನೋತ್ಸವದ ಕಾರ್ಯಕಾರಿ ಸಮಿತಿ ಹಾಗೂ ಶಾಲಾ ಪೂರ್ವ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳ ಪೋಷಕರು, ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಜೋನ್.ಕೆ.ಪಿ., ಮನ್ವಿತಾ.ಡಿ,. ಗೌರವ ಶಿಕ್ಷಕಿ ಯಶಸ್ವಿನಿ ಕೆ.ಜಿ, ಆಂಗ್ಲ ಮಾಧ್ಯಮ ಶಿಕ್ಷಕಿ ಸುಜಯರವರು ಉಪಸ್ಥಿತರಿದ್ದು ಸಹಕರಿಸಿದರು. ಶಾಲಾ ಶಿಕ್ಷಕರಾದ ಅಬ್ದುಲ್ ಲತೀಫ್. ಸಿ ಕಾರ್ಯಕ್ರಮವನ್ನು ನಿರೂಪಿಸಿ, ಸಹ ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ವಂದಿಸಿದರು.