ರೋಟರಿ ಕ್ಲಬ್ ಪುತ್ತೂರು ಪೂರ್ವಕ್ಕೆ ‘ಪ್ಲಾಟಿನಂ ಪ್ಲಸ್ ಪ್ರಶಸ್ತಿ’ ಸೇರಿದಂತೆ ಹಲವು ಪ್ರಶಸ್ತಿಗಳು

0

ಪುತ್ತೂರು: ಸಮಾಜ ಸೇವಾ ಸಂಸ್ಥೆಗಳಲ್ಲಿ ಒಂದಾಗಿರುವ ಪುತ್ತೂರಿನ ಪ್ರತಿಷ್ಠಿತ ರೋಟರಿ ಕ್ಲಬ್ ಪುತ್ತೂರು ಪೂರ್ವ 2023-24ನೇ ಸಾಲಿನಲ್ಲಿ ಸಲ್ಲಿಸಿದ ಅತ್ಯುತ್ತಮ ಸಮಾಜ ಸೇವೆಗೆ ರೋಟರಿ ಕ್ಲಬ್‌ನ ಅತ್ಯುನ್ನತ ಪ್ರಶಸ್ತಿ ‘ಪ್ಲಾಟಿನಂ ಪ್ಲಸ್’ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.



ಅತೀ ಹೆಚ್ಚು ಸದಸ್ಯತ್ವ ನೋಂದಾವಣೆಗೆ ಎಕ್ಸಲೆನ್ಸ್ ಪ್ರಶಸ್ತಿ, ಕ್ಲಬ್‌ನ ಶಾಶ್ವತ ಯೋಜನೆಗಳಿಗೆ ಮಹೊನ್ನತ ಕೊಡುಗೆ, ಜಿಲ್ಲಾ ಯೋಜನೆಗಳಿಗೆ ಟಿಆರ್‌ಎಫ್ ಕೊಡುಗೆಗಳಿಗೆ ಜಿಲ್ಲಾ ರಾಜ್ಯ ಪಾಲರ ವಿಶಿಷ್ಠ ಪ್ರಶಸ್ತಿ, ಕ್ಲಬ್‌ನ ವಿಸ್ತರಣೆಯ ಅಂಗವಾಗಿ ರೋಟರಿ ಕ್ಲಬ್ ಪುತ್ತೂರು ಬಿರುಮಲೆ ಹಿಲ್ಸ್ ಎಂಬ ನೂತನ ಕ್ಲಬ್ ರಚನೆ ಅಭಿನಂದನಾ ಪತ್ರ ಹಾಗೂ ರಸ್ತೆ ಸುರಕ್ಷತೆ ಮತ್ತು ಜಾಗೃತಿ ಕಾರ್ಯಕ್ರಮಗಳಿಗೆ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.


ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ-3181 ಇದರ ವತಿಯಿಂದ ಮೈಸೂರಿನಲ್ಲಿ ನಡೆದ 2023-24ನೇ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಪ್ರಶಸ್ತಿ ಸ್ವೀಕರಿಸಿದರು. ಕ್ಲಬ್‌ನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ, ನಿಯೋಜಿತ ಅಧ್ಯಕ್ಷ ಡಾ.ರವಿಪ್ರಕಾಶ್, ಜಿಲ್ಲಾ ಸಹಾಯಕ ಗವರ್ನರ್ ಪುರಂದರ ರೈ ಮಿತ್ರಂಪಾಡಿ, ಪ್ರಮುಖರಾದ ವಿಶ್ವಾಸ್ ಶೆಣೈ, ಸೂರ್ಯನಾಥ ಆಳ್ವ, ಕೇಶವ ನಾಯಕ್, ಶಿವರಾಮ ಆಳ್ವ, ಸುರೇಂದ್ರ ರೈ, ವಸಂತ ಜಾಲಾಡಿ, ಮುರಳೀಶ್ಯಾಂ, ಶಶಿಕರಣ್ ರೈ ನೂಜಿಬೈಲು, ಡಾ.ಶ್ಯಾಮ್ ಪ್ರಸಾದ್‌ರವರನ್ನು ಮೊದಲಾದವರು ಉಪಸ್ಥಿತರಿದ್ದರು.

2023-24ನೇ ಸಾಲಿನಲ್ಲಿ ಕ್ಲಬ್‌ನ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ನೇತ್ವತ್ವದಲ್ಲಿ ಕ್ಲಬ್‌ನ ಸದಸ್ಯರ ಪ್ರಾಯೋಜಕತ್ವ, ಸಹಕಾರದಲ್ಲಿ ತ್ಯಾಗರಾಜೆ ಅಂಗನವಾಡಿ ಕೇಂದ್ರಕ್ಕೆ ರೂ.1.5ಲಕ್ಷದಲ್ಲಿ ಆವರಣಗೋಡೆ, ಬನ್ನೂರು ಡಂಪಿಂಗ್ ಯಾರ್ಡ್‌ನಲ್ಲಿ ಇಂಟಿಗ್ರೇಟೆಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಕೊಡುಗೆ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಯಾನಿಟರಿ ಪ್ಯಾಡ್ ಬಿರ್ನಿಂಗ್ ಮೆಷಿನ್ ಮತ್ತು ವೆಡಿಂಗ್ ಮೆಷಿನ್ ಕೊಡುಗೆ, ಬಸ್ ನಿಲ್ದಾಣದ ಬಳಿಯ ಪೊಲಿಸ್ ಚೌಕಿ ನವೀಕರಣ, ನೆಹರುನಗರ ಅಂಗನವಾಡಿ ಕೇಂದ್ರಕ್ಕೆ ಟೈಲ್ಸ್ ಅಳವಡಿಕೆ, ವಳತ್ತಡ್ಕ ಅಂಗನವಾಡಿಗೆ ಮೇಜು, ಚೆಯರ್ ಕೊಡುಗೆ, ಕ್ಲಬ್‌ನ ಕನಸಿನ ಯೋಜನೆಯಾದ ಬನ್ನೂರು ಡಂಪಿಂಗ್ ಯಾರ್ಡ್‌ನಲ್ಲಿ ರೂ.3ಕೋಟಿ ಮೊತ್ತದ ಬಯೋಗ್ಯಾಸ್ ಪ್ಲಾಂಟ್‌ನ ಲೋಕಾರ್ಪಣೆ, ಉಪ್ಪಳಿಗೆ ಶಾಲಾ ಕುಡಿಯುವ ನೀರಿನ ಬಾವಿ ದುಸ್ಥಿಗೆ ರೂ.15,೦೦೦, ತಿಂಗಳಾಡಿ ಹಿ.ಪ್ರಾ ಶಾಲೆ ಕಂಪ್ಯೂಟರ್‌ಗೆ ಸಹಾಯಧನ, ಮುಂಡೂರು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಮವಸ್ತ್ರ ವಿತರಣೆ, ಕಕ್ಕೂರು ಅಂಗನವಾಡಿಗೆ ಧನ ಸಹಾಯ, ಓಜಾಲದಲ್ಲಿ ಸರಕಾರಿ ಶಾಲೆಗೆ ರೋಟರಿ ಕ್ಲಬ್ ಪುತ್ತೂರು ಸಿಟಿ ಜೊತೆಗೂಡಿ ಶಾಲಾ ಕೊಠಡಿ ನಿರ್ಮಾಣಕ್ಕೆ 14.36ಲಕ್ಷ ದೇಣಿಗೆ, ತಾಲೂಕಿನ 10 ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ರೂ.3.49ಲಕ್ಷ ಸ್ಯಾನಿಟರಿ ಪ್ಯಾಡ್ ಬರ್ನಿಂಗ್ ಮೆಷಿನ್ ಮತ್ತು ವೆಂಡಿಂಗ್ ಮೆಷಿನ್, ಪಾಣಾಜೆಯಲ್ಲಿ ವಿವಿಧ ಸಂಘ ಸಂಸ್ಥಗೆಳ ಸಹಯೋಗದಲ್ಲಿ ಉಚಿತ ಕಣ್ಣಿ ಚಿಕಿತ್ಸ ಶಿಬಿರ ಸೇರಿದಂತೆ ಹಲವು ಸಮಾಜಮುಖಿ ಕೊಡುಗೆಗಳನ್ನು ಒಂದು ವರ್ಷದ ಅವಧಿಯಲ್ಲಿ ನೀಡಿರುತ್ತದೆ ಎಂದು ಕ್ಲಬ್‌ನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here