ಸಿಝ್ಲರ್ ಗ್ರೂಪ್ಸ್ ನಿಂದ ಕೃಷಿ ಯಂತ್ರೋಪಕರಣಗಳ ಮಳಿಗೆ “ಸಿಝ್ಲರ್ಸ್ ಅಗ್ರಿಝೋನ್” ಬೊಳ್ವಾರಿನಲ್ಲಿ ಶುಭಾರಂಭ

0

ಪುತ್ತೂರು: ಸಿಝ್ಲರ್ ಗ್ರೂಪ್ಸ್ ನಿಂದ ಕೃಷಿ ಯಂತ್ರೋಪಕರಣಗಳ ಮಾರಾಟ ಹಾಗೂ ಸೇವಾ ಮಳಿಗೆ “ಸಿಝ್ಲರ್ಸ್ ಅಗ್ರಿಝೋನ್” ಬೊಳ್ವಾರಿನಲ್ಲಿನ ನ್ಯೂ ಅಂಕಲ್ ಸ್ವೀಟ್ಸ್ ಎದುರಿನ ಕಟ್ಟಡದಲ್ಲಿ ಜೂ.12ರಂದು ಶುಭಾರಂಭಗೊಂಡಿತು. ಸಿಝ್ಲರ್ ಫ್ರೆಂಡ್ಸ್ ಸಂಸ್ಥೆಯ ಮುಖ್ಯಸ್ಥ ಪ್ರಸನ್ನ ಕುಮಾರ್ ಶೆಟ್ಟಿರವರ ತಾಯಿ ಸುಲೋಚನಾ ಎನ್.ಶೆಟ್ಟಿರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಅರ್ಚಕರಾದ ಜಯರಾಮ ಕೆದಿಲಾಯರವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಸಿಝ್ಲರ್ ಫ್ರೆಂಡ್ಸ್ ಮುಖ್ಯಸ್ಥ ಪ್ರಸನ್ನಕುಮಾರ್ ಶೆಟ್ಟಿ ಸಹೋದರಾದ ಸುಳ್ಯದಲ್ಲಿ ಎಸಿಎಫ್ ಆಗಿರುವ ಪ್ರವೀಣ್ ಶೆಟ್ಟಿ, ಪತ್ನಿ ಪ್ರತಿಮಾ ಪಿ.ಶೆಟ್ಟಿ, ಪುತ್ರಿಯರಾದ ಹಿತಾಲಿ ಹಾಗೂ ರೀಶಾ, ಸಂಸ್ಥೆಯ ಮಾರ್ಕೆಟಿಂಗ್ ಹೆಡ್ ಹೇಮಂತ್ ಕುಮಾರ್ ಬೆಂಗಳೂರು, ಸದಾಶಿವ ರೈ(ಕೃಷಿ ಏಜೆನ್ಸೀಸ್), ರಾಕೇಶ್ ಡಿ’ಸೋಜ (ಅಗ್ರಿಝೋನ್), ಸಂತೋಷ್ ಕೆ, ರಫೀಕ್ ಸಿಝ್ಲರ್ , ಕಟ್ಟಡ ಮಾಲಕ ಇಮ್ರಾಜ್ ಬೊಳ್ವಾರು, ಸಂಸ್ಥೆಯ ಸಿಬ್ಬಂದಿಗಳಾದ ನಳಿನಿ, ವಿಜೇತ, ಬಾಲಕೃಷ್ಣ ಮದಕ, ಅರುಣ್ ನಗರ, ಹೇಮಂತ್ ಮಾಡಾವು, ಹರ್ಷ ಮಿತ್ತೂರು ಸಹಿತ ಹಲವರು ಉಪಸ್ಥಿತರಿದ್ದರು. 

ವಿವಿಧ ಮಾದರಿಯ ಔಷಧಿ ಸಿಂಪಡಿಸುವ ಯಂತ್ರ(ಪವರ್ ಸ್ಪ್ರೇಯರ್ಸ್), ಮರ ಕೊಯ್ಯುವ ಯಂತ್ರ, ಬ್ಯಾಟರಿ ಚಾಲಿತ ಸ್ಪ್ರೇಯರ್, ಗುಂಡಿ ತೋಡುವ ಯಂತ್ರ, ಅಗತೆ ಮಾಡುವ ಯಂತ್ರ, ವಿವಿಧ ಮಾದರಿಯ ಕಳೆ ಕೊಚ್ಚುವ ಯಂತ್ರಗಳು, ವಾಟರ್ ಪಂಪ್ ಸೆಟ್, ಕೊಟ್ಟಿಗೆ ತೊಳೆಯುವ ಯಂತ್ರ ಹಾಗೂ ಇನ್ನಿತರ ಕೃಷಿ ಯಂತ್ರೋಪಕರಣಗಳು ದೊರೆಯುತ್ತದೆ. ಹೆಚ್ಚಿನ ಮಾಹಿತಿಗೆ 8867258304, 9901263058 ನಂಬರಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಮಾನ್ಸೂನ್ ಆಫರ್..

ಸಂಸ್ಥೆಯ ಉದ್ಘಾಟನಾ ಪ್ರಯುಕ್ತ ರಿಯಾಯಿತಿ ದರದಲ್ಲಿ ಕೃಷಿ ಯಂತ್ರಗಳನ್ನು ಪೂರೈಸಲಾಗುತ್ತಿದ್ದು, ಈ ಸುವರ್ಣವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಪ್ರಥಮ ಖರೀದಿ..

ಸಂಸ್ಥೆಯ ಉದ್ಘಾಟನಾ ಪ್ರಯುಕ್ತ ಪ್ರಥಮ ಖರೀದಿಯನ್ನು ಸುಶಾಂತ್ ಹಾಗೂ ರಾಜೇಶ್ ರವರು ನೆರವೇರಿಸಿದ್ದು, ಸಿಝ್ಲರ್ ಗ್ರೂಪ್ಸ್ ಮುಖ್ಯಸ್ಥ ಪ್ರಸನ್ನ ಕುಮಾರ್ ಶೆಟ್ಟಿಯವರು ಖರೀದಿ ಐಟಂ ಅನ್ನು ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here