ಶ್ರೀ ಮಹಾಲಿಂಗೇಶ್ವರ ಐಟಿಐಯ ಎಲ್ಲಾ ವಿದ್ಯಾರ್ಥಿಗಳಿಗೂ ಉದ್ಯೋಗವಕಾಶ – ಪ್ರಾಂಶುಪಾಲ ಪ್ರಕಾಶ್ ಪೈ

0

ಪುತ್ತೂರು: ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯಿಂದ ಅನುದಾನ ಪಡೆಯುತ್ತಿದ್ದು ಕಳೆದ 38 ವರ್ಷಗಳಿಂದ ಯುವ ಜನತೆಗೆ ಕೌಶಲ್ಯ ಕುರಿತ ತಾಂತ್ರಿಕ ಶಿಕ್ಷಣ ನೀಡುವಲ್ಲಿ ಸ್ವ ಉದ್ಯೋಗ ಮತ್ತು ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಮಾನವ ಸಂಪನ್ಮೂಲ ಒದಗಿಸುವಲ್ಲಿ ಅಂತ್ಯಂತ ಪ್ರಮುಖ ಪಾತ್ರ ವಹಿಸುತ್ತಿರುವ ಪುತ್ತೂರು ಕೊಂಬೆಟ್ಟಿನಲ್ಲಿರುವ ಶ್ರೀ ಮಹಾಲಿಂಗೇಶ್ವರ ಐಟಿಐ ಸಂಸ್ಥೆಯಲ್ಲಿ ಪ್ರತಿ ವರ್ಷ ಕ್ಯಾಂಪಸ್ ಸಂದರ್ಶನದ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಲಭ್ಯವಾಗುತ್ತಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಪ್ರಕಾಶ್ ಪೈ ಅವರು ತಿಳಿಸಿದ್ದಾರೆ.

ಪುತ್ತೂರು ಸುದ್ದಿ ಮೀಡಿಯಾದಲ್ಲಿ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ಆಶ್ರಯದಲ್ಲಿರುವ ಈ ಸಂಸ್ಥೆ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಸಂಸ್ಥೆಗಳಲ್ಲೊಂದಾಗಿದೆ. ಐಟಿಐಗಳು ಇಂದಿನ ಯುವ ಜನತೆಗೆ ಕೌಶಲ್ಯ ಕುರಿತ ತಾಂತ್ರಿಕ ಶಿಕ್ಷಣ ನೀಡುವಲ್ಲಿ ಸ್ವ ಉದ್ಯೋಗ ಮತ್ತು ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಮಾನವ ಸಂಪನ್ಮೂಲ ಒದಗಿಸುವಲ್ಲಿ ಅಂತ್ಯಂತ ಪ್ರಮುಖ ಪಾತ್ರವಹಿಸುತ್ತಿದೆ. ಇತ್ತೀಚೆಗೆ ಕೇಂದ್ರ ಸರಕಾರ ಐಟಿಐಯನ್ನು ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸುವ ನಿಟ್ಟಿನಲ್ಲಿ ಆಧುನಿಕ ಉಪಕರಣವನ್ನೊಗೊಂಡ ಪ್ರಯೋಗಲಾಯ, ದಾಖಲಾತಿ, ತರಬೇತಿ, ಪ್ರಮಾಣಪತ್ರಗಳ ಸಂಪೂರ್ಣ ಡಿಜಿಟಲಿಕರಣ ಕೈಗೊಂಡಿದೆ. ಕಳೆದ ವರ್ಷದಲ್ಲಿ ನಮ್ಮ ಸಂಸ್ಥೆ ಶೇ.100 ದಾಖಲಾತಿ ಪಡೆದಿದ್ದು, ಕಳೆದ ವರ್ಷ ಶೇ.96 ವಿದ್ಯಾರ್ಥಿಗಳು ಉತ್ತೀರ್ಣರಾಗುವಲ್ಲಿ ಯಶಸ್ವಿಯಾಗಿದ್ದೇವೆ.

ಪ್ರತಿ ವರ್ಷ ಕ್ಯಾಂಪಸ್ ಸಂದರ್ಶದ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಲಭ್ಯವಾಗುತ್ತಿದೆ. ಇದುರವರೆಗೆ ಸುಮಾರು 16 ಉದ್ಯಮಗಳು ನಮ್ಮ ಕ್ಯಾಂಪಸ್ ಆಯ್ಕೆಯಲ್ಲಿ ಭಾಗವಹಿಸಿದೆ. ಇದರಲ್ಲಿ ನಮ್ಮ ಎಲ್ಲಾ ವಿದ್ಯಾರ್ಥಿಗಳೂ ಆಯ್ಕೆಗೊಂಡಿದ್ದಾರೆ ಎಂದವರು ಹೇಳಿದರು.

ಇಂಡಸ್ಟ್ರೀಯಲ್ಲಿ ದೊಡ್ಡ ಮಟ್ಟದ ಉದ್ಯೋಗವಕಾಶ:
ಕ್ಯಾಂಪಸ್ ಅಧಿಕಾರಿ ಹರೀಶ್ ಅವರು ಕ್ಯಾಂಪಸ್ ಆಯ್ಕೆಯ ಕುರಿತು ಮಾಹಿತಿ ನೀಡಿ ಬೇರೆ ವೃತ್ತಿ ಪರ ಕೋರ್ಸ್‌ಗಳಿಗಿಂತಲೂ ನಮ್ಮ ಐಟಿಐ ವಿದ್ಯಾರ್ಥಿಗಳಿಗೆ ಹೆಚ್ಚು ಉದ್ಯೋಗ ಲಭಿಸಿದೆ. ಮ್ಯಾನ್ಯುಪೆಕ್ಚರ್ ಸೆಕ್ಟರ್, ಪ್ರೊಡಕ್ಷನ್ ಸೆಕ್ಟರ್, ಎಲೆಕ್ಟ್ರಿಕ್ ಇವಿ ಸೆಕ್ಟರ್ ಎಲ್ಲಾ ಕಡೆಯಲ್ಲೂ ನಮ್ಮ ಐಟಿಐ ಮಕ್ಕಳಿಗೆ ತುಂಬಾ ಉದ್ಯೋಗವಕಾಶ ಲಭಿಸಿದೆ. ನಮ್ಮ ಐಟಿಐ ಸಂಸ್ಥೆಯಲ್ಲಿ ಕ್ಯಾಂಪಸ್ ಸಂದರ್ಶನ ಮಾಡುತ್ತೇವೆ. ಇದರ ಬೇರೆ ಬೇರೆ ಕಡೆ ಉದ್ಯೋಗ ಮೇಳಕ್ಕೂ ನಮ್ಮ ಮಕ್ಕಳನ್ನು ಕಳುಹಿಸಿದಾಗ ಅಲ್ಲಿ ಅವರು ಆಯ್ಕೆಗೊಂಡಿದ್ದಾರೆ. ನಮ್ಮಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ದೊಡ್ಡ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉದಾಹರಣೆಗೆ ಪ್ಲೋರಿಡ್ ಕಿರ್ಲೋಸ್ಕರ್, ಅಲ್ಟ್ರಾಟೆಕ್ ಸಿಮೆಂಟ್, ಮಾಸ್ಟರ್ ಪ್ಲಾನರಿ, ಭಾರತ್ ಬೆನ್ಸ್, ಟಾಟಾ ಮೋಟಾರ‍್ಸ್, ಸುಂದರಂ ಮೋಟಾರ‍್ಸ್ ಸಹಿತ ಹಲವಾರು ಕಂಪೆನಿಗಳಲ್ಲಿ ನಮ್ಮ ತರಬೇತಿ ಪಡೆದ ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ. ಮುಂದಿನ ದಿನ ಇನ್ನಷ್ಟು ದೊಡ್ಡ ಕಂಪೆನಿಗಳಿಂದ ಕ್ಯಾಂಪಸ್ ಸಂದರ್ಶನ ನಡೆಯಲಿದೆ. ಈ ನಿಟ್ಟಿನಲಿ ನಮ್ಮ ಎಲ್ಲಾ ಗ್ರಾಮೀಣ ಮಕ್ಕಳನ್ನು ಕರೆಸಿ ಗ್ರಾಮೀಣ ಮಕ್ಕಳಿಗೂ ಉದ್ಯೋಗ ಕೊಡಿಸುವ ಕೆಲಸ ನಮ್ಮ ಐಟಿಐ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಮ್ಮಲ್ಲಿ 8 ತರಗತಿಗಳಿವೆ. ನಾಲ್ಕು ಎಲೆಕ್ಟ್ರೋನಿಕ್ ತರಗತಿಗಳಿವೆ. ಸಿವಿಲ್ ವಿಭಾಗದಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಡಿಮಾಂಡ್ ಜಸ್ತಿ ಇದೆ. ಅಷ್ಟು ಪೂರಕೆ ಆಗುತ್ತಿಲ್ಲ. ಯಾವುದೇ ಇಂಡಸ್ಟ್ರಿಯನ್ನು ನೋಡಿದರೂ ದೊಡ್ಡ ಮಟ್ಟದ ಉದ್ಯೋಗವಕಾಶವಿದೆ. ಜೊತೆಗೆ ನಾವು ನಮ್ಮ ಮಕ್ಕಳಿಗೆ ಎಲ್ಲಾ ರೀತಿಯ ಜ್ಞಾನವನ್ನು ಕೊಡುತ್ತಿದ್ದೇವೆ. ಸಂಸ್ಥೆಯಲ್ಲೂ ಕೌಶಲ್ಯ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ತರಬೇತಿ ಅಧಿಕಾರಿ ವಸಂತಿ ಉಪಸ್ಥಿತರಿದ್ದರು.

ಅಖಿಲ ಭಾರತ ವೃತ್ತಿ ಪರೀಕ್ಷೆಯ ಕೇಂದ್ರ:
ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರಕಾರ ವಿದ್ಯಾರ್ಥಿಗಳಿಗೆ ದೇಶದಾದ್ಯಂತ ಅಖಿಲ ಭಾರತ ವೃತ್ತಿ ಪರೀಕ್ಷೆಗಳನ್ನು ನಡೆಸುತ್ತಿದ್ದು, ಪುತ್ತೂರು ಮತ್ತು ಆಸುಪಾಸಿನ ತಾಲೂಕುಗಳಲ್ಲಿ ಇರುವ ಪರೀಕ್ಷಾ ಕೇಂದ್ರಗಳಲ್ಲಿ ಪುತ್ತೂರು ಶ್ರೀ ಮಹಾಲಿಂಗೆಶ್ವರ ಐಟಿಐ ಕೂಡಾ ಪರೀಕ್ವಷಾ ಕೇಂದ್ರವಾಗಿದೆ. ಈ ಕೇಂದ್ರಕ್ಕೆ ಸುಮಾರು 350ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪರೀಕ್ಷೆಗೆ ಆಗಮಿಸುತ್ತಾರೆ ಎಂದು ಪ್ರಕಾಶ್ ಪೈ ಹೇಳಿದರು.

LEAVE A REPLY

Please enter your comment!
Please enter your name here