ಮುಖ್ಯಮಂತ್ರಿ ಗಗನ್. ಜೆ. ಕೆ, ಉಪಮುಖ್ಯಮಂತ್ರಿ ಅಹಮ್ಮದ್ ಅಸ್ಲಾಂ
ಕಾಣಿಯೂರು : ಕೊಪ್ಪ ಸ. ಕಿ. ಪ್ರಾ. ಶಾಲೆ ಇಲ್ಲಿಯ ಶಾಲಾ ಮಂತ್ರಿ ಮಂಡಲವನ್ನು ರಚಿಸಲಾಯಿತು. ಮುಖ್ಯಮಂತ್ರಿಯಾಗಿ ಗಗನ್. ಜೆ. ಕೆ ಉಪ ಮುಖ್ಯಮಂತ್ರಿಯಾಗಿ ಅಹಮ್ಮದ್ ಅಸ್ಲಾಂ ಆಯ್ಕೆಗೊಂಡರು.
ಶಿಕ್ಷಣ ಮಂತ್ರಿಯಾಗಿ ಆಶಿಕಾ. ಕೆ.,ಅರೋಗ್ಯ ಮಂತ್ರಿಯಾಗಿ ದಿವೀಶ್. ಕೆ, ಕ್ರೀಡಾ ಮಂತ್ರಿಯಾಗಿ ದ್ರುವನ್, ರಕ್ಷಣಾ ಮಂತ್ರಿಯಾಗಿ ಸ್ವಸ್ತಿಕ್, ನೀರಾವರಿ ಮಂತ್ರಿಯಾಗಿ ಧವನ್, ಸ್ವಚ್ಛತಾ ಮಂತ್ರಿಯಾಗಿ ಹವ್ಯಾಸ್, ಗ್ರಂಥಾಲಯ ಮಂತ್ರಿಯಾಗಿ ಸುಹಾನ, ತೋಟಗಾರಿಕೆ ಮಂತ್ರಿಯಾಗಿ ಆಕಾಶ್, ಹಣಕಾಸು ಮಂತ್ರಿಯಾಗಿ ಹೃತಿಕ್, ಆಹಾರ ಮಂತ್ರಿಯಾಗಿ ಶಮಿತಾ, ವಾರ್ತಾ ಮಂತ್ರಿಯಾಗಿ ಶ್ರಾವ್ಯ, ಕಾನೂನು ಮಂತ್ರಿಯಾಗಿ ಘನಶ್ಯಾಮ ಎಸ್ ಡಿ ಗೌಡ, ಅಭಿವೃದ್ಧಿ ಮಂತ್ರಿಯಾಗಿ ಸಾತ್ವಿಕ್ ಇವರು ಆಯ್ಕೆಯಾದರು. ಮುಖ್ಯ ಶಿಕ್ಷಕ ನಾರಾಯಣ ಡಿ ಪುಣಚ ಇವರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಅತಿಥಿ ಶಿಕ್ಷಕ ಸುರೇಶ ನಾಯ್ಕ, ಗೌರವ ಶಿಕ್ಷಕಿ ಕುಮಾರಿ ಹವ್ಯ ಇವರು ಸಹಕರಿಸಿದರು.