ಪುತ್ತೂರ ಮುತ್ತು ಪ್ರವಾಸಿ ಕಾರು ಚಾಲಕ ಮತ್ತು ಮಾಲಕರ ಸಂಘಕ್ಕೆ ಆಯ್ಕೆ – ಅಧ್ಯಕ್ಷ ಪ್ರವೀಣ್, ಕಾರ್ಯದರ್ಶಿ ವಿಕ್ರಂ

0

ಪುತ್ತೂರು: ಪುತ್ತೂರ ಮುತ್ತು ಪ್ರವಾಸಿ ಕಾರು ಚಾಲಕ ಮತ್ತು ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಪ್ರವೀಣ್ ಹಾಗೂ ಕಾರ್ಯದರ್ಶಿಯಾಗಿ ವಿಕ್ರಂರವರು ಆಯ್ಕೆಯಾಗಿದ್ದಾರೆ.
ಸ್ವಾಗತ್ ಹೊಟೇಲ್ ಸಭಾಂಗಣದಲ್ಲಿ ಜೂ.11ರಂದು ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸರ್ವಾನುಮತದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಯೋಗೀಶ್, ಗೌರವಾಧ್ಯಕ್ಷರಾಗಿ ಮೋನಪ್ಪ ಪೂಜಾರಿ, ಕೋಶಾಧಿಕಾರಿಯಾಗಿ ಜಗದೀಶ್, ಸಲಹೆಗಾರರಾಗಿ ರಮೇಶ್, ಇಂದುಶೇಖರ್, ಕುಶಾಲಪ್ಪರವರನ್ನು ಆಯ್ಮೆ ಮಾಡಲಾಯಿತು. ಸಭೆಯಲ್ಲಿ ಸಂಘದ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.

LEAVE A REPLY

Please enter your comment!
Please enter your name here