ಸುದಾನ ಶಾಲೆಯಲ್ಲಿ ’ನೂತನ ವಿದ್ಯಾರ್ಥಿ’ ದಿನ

0

ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಹೊಸದಾಗಿ ಶಾಲೆಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗಾಗಿ ನೂತನ ವಿದ್ಯಾರ್ಥಿ ದಿನ (ಫ್ರೆಶರ‍್ಸ್ ಡೇ)ವನ್ನು ಜೂ.14 ರಂದು ಆಯೋಜಿಸಲಾಗಿತ್ತು. ಶಾಲಾ ಮುಖ್ಯಶಿಕ್ಷಕಿ ಶೋಭಾ ನಾಗರಾಜ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಹಳೆ ವಿದ್ಯಾರ್ಥಿಗಳು ದೇವತಾ ಸ್ತುತಿ ಮತ್ತು ನೃತ್ಯಗಳೊಂದಿಗೆ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತಕೋರಿದರು. ಕಾರ್ಯಕ್ರಮದಲ್ಲಿ ಹೊಸ ವಿದ್ಯಾರ್ಥಿಗಳು ಏಕಪಾತ್ರಾಭಿನಯ, ಭರತನಾಟ್ಯ, ಹಾಡು, ಜನಪದ ನೃತ್ಯ, ಕೀಬೋರ್ಡ್ ವಾದನ ಮುಂತಾದ ಕಾರ್ಯಕ್ರಮಗಳನ್ನು ನೀಡಿದರು. ವಿದ್ಯಾರ್ಥಿಗಳು ರಚಿಸಿದ ಚಿತ್ರಗಳ ಪ್ರದರ್ಶನವೂ ನಡೆಯಿತು. 5ನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಹೊಸ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಶಾಲಾ ಸಹಶಿಕ್ಷಕಿ ಬಕುಳಾ ನಿರೂಪಿಸಿದರು. ಸಹಶಿಕ್ಷಕ ಹೇಮಲತ, ರಂಜಿತ್ ಮಥಾಯಿಸ್ ಮತ್ತು ಶಿವಗಿರಿ ಕಲ್ಲಡ್ಕರವರು ಸಹ

LEAVE A REPLY

Please enter your comment!
Please enter your name here