ಪುತ್ತೂರು: ಸರ್ವೆ ಕಲ್ಪಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನರಿಮೊಗರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮುಂಡೂರು ಸ.ಉ.ಹಿ.ಪ್ರಾ ಶಾಲೆಯು ಹಿರಿಯ ಹಾಗೂ ಕಿರಿಯ ಎರಡೂ ವಿಭಾಗಗಳಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಕಿರಿಯರ ವಿಭಾಗದ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಅನಘ ಕೆ ಹಾಗೂ ಹಿರಿಯರ ವಿಭಾಗದ ಕಥೆ ಹೇಳುವ ಸ್ಪರ್ಧೆಯಲ್ಲಿ ಸಾನ್ವಿ ಕೆ ಆರ್ ಹಾಗೂ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಮುಹಮ್ಮದ್ ಹಿಶಾಮ್ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಿರಿಯರ ವಿಭಾಗದ ಭಕ್ತಿ ಗೀತೆಯಲ್ಲಿ ಶ್ರೀಹಾನ್ ಕ್ಲೇ ಮಾಡೆಲಿಂಗಿನಲ್ಲಿ ವಿಶು ಎನ್ ಆಚಾರ್ಯ, ಆಶುಭಾಷಣದಲ್ಲಿ ವೇದಿತ ಹಾಗೂ ಹಿರಿಯರ ವಿಭಾಗದಲ್ಲಿ ಮಿಮಿಕ್ರಿಯಲ್ಲಿ ಗುಣಸಾಗರ್, ಚಿತ್ರಕಲೆಯಲ್ಲಿ ಪ್ರಣವಿ, ಭಕ್ತಿ ಗೀತೆಯಲ್ಲಿ ಧನ್ವಿತ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕಿರಿಯರ ವಿಭಾಗದ ಛದ್ಮ ವೇಷದಲ್ಲಿ ಯಶ್ವಿನ್, ಅಭಿನಯ ಗೀತೆಯಲ್ಲಿ ಧನ್ವಿ, ಚಿತ್ರಕಲೆಯಲ್ಲಿ ಕುಶನ್ ಹಾಗೂ ಹಿರಿಯರ ವಿಭಾಗದಲ್ಲಿ ಹಿಂದಿ ಕಂಠಪಾಠದಲ್ಲಿ ಸಾನ್ವಿ ಕೆ ಆರ್, ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಅಭಿರಾಮ್, ದೇಶಭಕ್ತಿ ಗೀತೆಯಲ್ಲಿ ಧನ್ವಿತ ಹಾಗೂ ಆಶುಭಾಷಣದಲ್ಲಿ ಅನ್ವಿತ ಅವರು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಶಾಲಾ ಮುಖ್ಯಗುರು ವಿಜಯ ಪಿ ತಿಳಿಸಿದ್ದಾರೆ.
ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವೃಂದದವರಿಗೆ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅಶೋಕ್ ಅಂಬಟ ಅಭಿನಂದನೆ ಸಲ್ಲಿಸಿದರು.