ಕೆಯ್ಯೂರು : ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇದರ ಪದವಿಪೂರ್ವ ಕಾಲೇಜು ವಿಭಾಗದ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ವಿವಿಧ ಸ್ಥಾನಗಳಿಗೆ ಚುನಾವಣೆ ಜೂ.15ರಂದು ನಡೆಯಿತು.
ಉಪನ್ಯಾಸಕಿ ಉಮಾಶಂಕರಿ ಎಸ್ ಕೆ ಚುನಾವಣಾಧಿಕಾರಿಯಾಗಿ, ಉಪನ್ಯಾಸಕರಾದ ಕಮಲಾ, ಅರ್ಚನಾ ರಾವ್ ಎ ಎಸ್, ಗುಣಶೀಲಾ ಕೆ ಎನ್ ಮತ್ತು ಸ್ಟೆಲ್ಲಾ ಜೆಸ್ನಾ ಲೂವಿಸ್ ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ವಿದ್ಯಾರ್ಥಿಗಳು ಸರತಿ ಸಾಲಲ್ಲಿ ನಿಂತು ಮೊಬೈಲ್ ಆಪ್ ಮತಯಂತ್ರಗಳ ಮೂಲಕ ಮತ ಚಲಾಯಿಸಿದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಸಿಂಚನಾ ಎಸ್, ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ರಂಜೀನಾ, ಉಪಾಧ್ಯಕ್ಷನಾಗಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಲೋಕೇಶ್, ಸಹಕಾರ್ಯದರ್ಶಿಯಾಗಿ ಪ್ರಥಮ ಪಿಯುಸಿ ಕಲಾ ವಿಭಾಗದ ಭವಿಷ್ಯ ಆಯ್ಕೆಯಾದರು.
ಸಂಸ್ಥೆಯ ಪ್ರಾಂಶುಪಾಲ ಇಸ್ಮಾಯಿಲ್ ಪಿ ಅವರು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆಯ ಮಹತ್ವ ಮತ್ತು ಕಾಲೇಜು ಹಂತದಲ್ಲಿ ನಡೆಸುವ ಚುನಾವಣೆಯ ಉದ್ದೇಶವನ್ನು ವಿವರಿಸಿದರು.