ಜಿಡೆಕಲ್ಲು ರೆಪ್ರಿಜರೇಟರ್ ಸ್ಪೋಟ – ಸಂತ್ರಸ್ಥರಿಗೆ ಮಾಜಿ ಶಾಸಕರಿಂದ ಆರ್ಥಿಕ ನೆರವು

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ ಬಳಿ ರೆಪ್ರಿಜರೇಟರ್ ಸ್ಪೋಟಗೊಂಡು‌ ಮನೆಯ ವಿದ್ಯುತ್ ಉಪಕರಣ ಸೇರಿದಂತೆ ಮನೆಯಲ್ಲಿದ್ದ ಇತರ ಪರಿಕರಕ್ಕೆ ಬೆಂಕಿ ಹತ್ತಿಗೊಂಡು ಹಾನಿಗೊಂಡ ಮನೆಗೆ ಮಾಜಿ‌ ಶಾಸಕ ಸಂಜೀವ ಮಠಂದೂರು ಅವರು ಭೇಟಿ ನೀಡಿ ಆರ್ಥಿಕ ನೆರವು ನೀಡಿದರು.
ರೆಫ್ರಿಜರೇಟರ್ ಸ್ಪೋಟಗೊಂಡು ಮನೆಯಲ್ಲಿ ವಿದ್ಯುತ್ ಪರಿಕರ ಸಹಿತ ಮನೆ ಹಾನಿಗೊಂಡು ನೊಂದಿರುವ ಮನೆಯ ಯಜಮಾನ ಮೋನಪ್ಪ ಪುರುಷ ಅವರನ್ನು ಸಮಾಧಾನ ಪಡಿಸಿದ ಸಂಜೀವ ಮಠಂದೂರು ಆರ್ಥಿಕ ನೆರವು ನೀಡಿದರು. ಬಳಿಕ ತಹಸೀಲ್ದಾರ್ ಅವರಿಗೆ ಕರೆ ಮಾಡಿ ಸೂಕ್ತ ಪರಿಹಾರ ಒದಗಿಸುವಲ್ಲಿ ಸಹಾಯ ಮಾಡುವಂತೆ ತಿಳಿಸಿದರು. ಈ ಸಂದರ್ಭ ನಗರಸಭೆ ಸದಸ್ಯೆ ರೋಹಿಣಿ, ಯುವರಾಜ್ ಪೆರಿಯತ್ತೋಡಿ, ವಿಶ್ವನಾಥ ಕುಲಾಲ್, ಹರೀಶ್ ಸಹಿತ ಹಲವಾರು ಮಂದಿ ಮಾಜಿ ಶಾಸಕರ ಜೊತೆ ಬಂದಿದ್ದರು.

LEAVE A REPLY

Please enter your comment!
Please enter your name here