ಜೂ.29: ತಾ|ಬಿಲ್ಲವ ಸಂಘ, ಬಿಲ್ಲವ ನಗರ ಸಮಿತಿಯಿಂದ ವಾರ್ಷಿಕ ಮಹಾಸಭೆ-ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ, ಅಭಿನಂದನಾ ಕಾರ್ಯಕ್ರಮ

0

ಅರ್ಜಿ ಫಾರಂ ಹಿಂತಿರುಗಿಸಲು ಜೂ.25 ಕೊನೆಯ ದಿನಾಂಕ

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಮತ್ತು ಬಿಲ್ಲವ ನಗರ ಸಮಿತಿ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ವಾರ್ಷಿಕ ಮಹಾಸಭೆ, ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮ ಜೂ.29 ರಂದು ಮಧ್ಯಾಹ್ನ ಬಪ್ಪಳಿಗೆ-ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಬಿಲ್ಲವ ನಗರ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳರವರ ಅಧ್ಯಕ್ಷತೆಯಲ್ಲಿ ಜರಗಲಿದೆ.


ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು. ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು ಅರ್ಜಿ ಫಾರಂನೊಂದಿಗೆ ಒಂದು ಭಾವಚಿತ್ರ ಕೊಡತಕ್ಕದ್ದು. ಉಚಿತ ಪುಸ್ತಕ ಪಡೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ವಿದ್ಯಾರ್ಥಿಗಳ ಪೋಷಕರೊಂದಿಗೆ ಹಾಜರಾಗಬೇಕು. ವಿದ್ಯಾರ್ಥಿಗಳು ಗೈರು ಹಾಜರಾದರೆ ಪುಸ್ತಕ ನೀಡಲಾಗುವುದಿಲ್ಲ. ಪುಸ್ತಕ ಪಡೆಯುವ ವಿದ್ಯಾರ್ಥಿಗಳು ಅರ್ಜಿ ಫಾರಂನ್ನು ಬಿಲ್ಲವ ಸಂಘದ ಕಛೇರಿಯಲ್ಲಿ ಪಡೆದು ಜೂ.26ನೇ ತಾರೀಖಿನ ಒಳಗಾಗಿ ಬಿಲ್ಲವ ಸಂಘದಲ್ಲಿ ಅರ್ಜಿ ಫಾರಂನ್ನು ಪಾವತಿಸತಕ್ಕದ್ದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here