ಅಂಗವಾಗಿ ಸರಸ್ವತಿ ವಿದ್ಯಾಲಯ ಪ್ರೌಢಶಾಲೆ ಹನುಮಾನ್ ನಗರ ದಲ್ಲಿ 10ನೇ ವರ್ಷದ ವಿಶ್ವ ಯೋಗ ದಿನವನ್ನು ಜೂ.21ರಂದು ಶಾಲೆಯ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರಾದ ವೆಂಕಟ್ರಮಣ ರಾವ್ ಮಂಕುಡೆ ವಹಿಸಿ , ನಾವು ಕಲಿತಂತಹ ವಿದ್ಯೆ ಅದು ನಮ್ಮ ನಿತ್ಯ ಜೀವನದಲ್ಲಿ ಅಭ್ಯಾಸವಾಗಬೇಕು. ಯೋಗ ಮತ್ತು ಪ್ರಾಣಾಯಾಮ ನಿರಂತರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ನಮ್ಮ ಜೀವನವನ್ನು ಗುರುತಿಸಿಕೊಳ್ಳುವುದರ ಮೂಲಕ ಬದುಕು ಸಾರ್ಥಕ ಮಾಡಿಕೊಳ್ಳಬೇಕು ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯೆ, ಪ್ರೌಢ ವಿಭಾಗದ ಮೇಲ್ವಿಚಾರಕಿ ಶ್ರೀಮತಿ ಪುಲಸ್ತ್ಯಾ ರೈ ಹಾಗೂ ಶ್ರೀ ಭಾರತಿ ಶಿಶುಮಂದಿರದ ಮೇಲ್ವಿಚಾರಕಿ, ಆಡಳಿತ ಮಂಡಳಿಯ ಸದಸ್ಯೆ ಸವಿತಾ ಶಿವ ಸುಬ್ರಮಣ್ಯ ಭಟ್ ಆರೋಗ್ಯದ ಸುಧಾರಿಕೆಗೆ ನಿರಂತರ ಯೋಗ ಅಭ್ಯಾಸ ಅಗತ್ಯವಾಗಿದೆ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಪ್ರೌಢ ವಿಭಾಗದ ಮುಖ್ಯಸ್ಥೆ ಶೈಲಶ್ರೀ ರೈ ಎಸ್ ಆಂಗ್ಲ ಮಾಧ್ಯಮ ವಿಭಾಗದ ಪ್ರಭಾರ ಮುಖ್ಯಮಾತಾಜಿ ಕುಮಾರಿ ಶ್ವೇತ ಕೊಡಿಂಬಾಳ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಯೋಗ ಪ್ರಾತ್ಯಕ್ಷತೆ ನಡೆಯಿತು. ಸರಸ್ವತಿ ವಿದ್ಯಾಲಯ ಪ್ರೌಢಶಾಲೆಯ ಶಾಲಾ ನಾಯಕಿ ವರ್ಷ ಎಸ್ 10ನೇ ತರಗತಿ ಸ್ವಾಗತಿಸಿ, ಆಂಗ್ಲ ವಿಭಾಗದ ಶಾಲಾ ನಾಯಕಿ ನಿಧಿ ಕೆ 9ನೇ ತರಗತಿ ವಂದಿಸಿದರು. ಯೋಗ ಪ್ರಾತ್ಯಕ್ಷಿತೆಯನ್ನು ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಲಕ್ಷ್ಮೀಶ ಗೌಡ ಆರಿಗ ಹಾಗೂ ಸತೀಶ್ ಚಂದ್ರ. ಕೆ ನಿರ್ವಹಿಸಿದರು. ಕುಮಾರಿ ಸಿಂಚನ 9ನೇ ತರಗತಿ ಕಾರ್ಯಕ್ರಮ ನಿರೂಪಿಸಿದರು.