ಕನ್ನಡ ಮಾದ್ಯಮ ಕಲಿಕೆಯಿಂದ ಉನ್ನತ ಸ್ಥಾನ- ಪುರುಷೋತ್ತಮ ರೈ
ಪುತ್ತೂರು: ದ.ಕ.ಜಿ.ಪಂ, ಹಿರಿಯ ಪ್ರಾಥಮಿಕ ಶಾಲೆ ಕುರಿಯ ದಲ್ಲಿ ಜೂ.21ರಂದು 77 ಮಂದಿ ಶಾಲಾ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ, ಛತ್ರಿ ವಿತರಣೆಯನ್ನು ಮಾಡಲಾಯಿತು.
ಆರ್ಯಾಪು ಗ್ರಾ.ಪಂ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈರವರು ತನ್ನ ಸಹೋದರ ಮಾಧವ ರೈಯವರ 50ನೇ ವರ್ಷದ ಪುಣ್ಯ ಸ್ಮರಣಾರ್ಥ ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕವನ್ನು ಕೊಡುಗೆ ನೀಡಿದರು. ಇದೇ ಸಂಧರ್ಭದಲ್ಲಿ ಆರ್ಯಾಪು ಗ್ರಾ.ಪಂ, ಸದಸ್ಯ ನಾಗೇಶ್ರವರು ಛತ್ರಿ ಕೊಡುಗೆಯಾಗಿ ನೀಡಿದರು.
ಕನ್ನಡ ಮಾದ್ಯಮ ಕಲಿಕೆಯಿಂದ ಉನ್ನತ ಸ್ಥಾನ- ಪುರುಷೋತ್ತಮ ರೈ
ಆರ್ಯಾಪು ಗ್ರಾ.ಪಂ, ಸದಸ್ಯ ಬೂಡಿಯಾರ್ ಪುರುಷೋತ್ತಮ ರೈಯವರು ಮಾತನಾಡಿ ಈಗಿನ ಪೋಷಕರಿಗೆ ಇಂಗ್ಗೀಷ್ ಮಾಧ್ಯಮ ಫ್ಯಾಶನ್ ಆಗಿದೆ. ಆದರೆ ಕನ್ನಡ ಮಾಧ್ಯಮದಲ್ಲಿ ಕಲಿಕೆಯನ್ನು ಮಾಡುವುದರಿಂದ ಉನ್ನತವಾದ ಸ್ಥಾನವನ್ನು ಪಡೆದವರು ತುಂಬಾ ಮಂದಿ ಇದ್ದಾರೆ. ಈ ನಿಟ್ಟಿನಲ್ಲಿ ಕುರಿಯ ಪ್ರಾಥಮಿ ಶಾಲೆಯಲ್ಲಿ ಈ ಬಾರಿ ಒಂದನೆ ತರಗತಿಗೆ ಸೇರ್ಪಡೆಯಾದವರ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಕುರಿಯ ಶಾಲೆಯಲ್ಲಿ ಉತ್ತಮ ಶಿಕ್ಷಕರು ಇದ್ದಾರೆ. ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರು ಹೆಚ್ಚು ಮುತುವರ್ಜಿಯನ್ನು ವಹಿಸಿಕೊಳ್ಳಬೇಕು. ನಾನು ಕಳೆದ 25 ವರ್ಷಗಳಿಂದ ಇಡೆಬೆಟ್ಟು ಹಾಗೂ 5 ವರ್ಷಗಳಿಂದ ಕುರಿಯ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ಕೊಡುಗೆಯಾಗಿ ನೀಡುತ್ತಿದ್ದೇನೆ. ಪ್ರತಿಯೊಬ್ಬರು ನಮ್ಮ ಊರಿನ ಶಾಲೆಯ ಮೇಲೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು.
ಶಾಲೆ ಹೆಚ್ಚಿನ ಆಭಿವೃದ್ಧಿ ಆಗಬೇಕು-ಅಬ್ದುಲ್ ಜಬ್ಬರ್
ಅಧ್ಯಕ್ಷತೆ ವಹಿಸಿದ್ದ ಕುರಿಯ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅಬ್ದುಲ್ಜಬ್ಬರ್ರವರು ಮಾತನಾಡಿ ನಮ್ಮ ಶಾಲೆಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬರೆಯುವ ಪುಸ್ತಕ ಕೊಡುಗೆ ನೀಡಿದ ಪುರುಷೋತ್ತಮ ರೈ ಹಾಗೂ ಛತ್ರಿ ಕೊಡುಗೆ ನೀಡಿದ ನಾಗೇಶ್ರವರಿಗೆ ಅಭಿನಂದನೆ ಸಲ್ಲಿಸಿದರು. ಕುರಿಯ ಶಾಲೆಯು ಇನ್ನೂ ಹೆಚ್ಚಿನ ಅಭಿವೃದ್ಧಿ ಆಗಬೇಕು, ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.
ಆರ್ಯಾಪು ಗ್ರಾ.ಪಂ ಸದಸ್ಯಯರುಗಳಾದ ನಾಗೇಶ್ ಮತ್ತು ಕಲಾವತಿಯವರು ಸಂದಭೋಚಿತವಾಗಿ ಮಾತನಾಡಿದರು
ಶಾಲಾ ಪ್ರಭಾರ ಮುಖ್ಯಗುರು ನವೀನ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಶಿಕ್ಷಕಿ ದಿವ್ಯಜೋತಿಯವರು ಶಾಲೆಯ ಚಟುವಟಿಕೆಯ ಬಗ್ಗೆ ಮಾತನಾಡಿದರು. ಗೌರವ ಶಿಕ್ಷಕಿ ರಮ್ಯ ವಂದಿಸಿದರು. ಶಿಕ್ಷಕಿ ಕವಿತಾ ಕಾರ್ಯಕ್ರಮ ನಿರೂಪಿಸಿದರು.
ಕುರಿಯ ಶಾಲೆ ಮಾದರಿ ಶಾಲೆ
ಗ್ರಾಮೀಣ ಪ್ರದೇಶದಲ್ಲಿ ಇರುವ ಕುರಿಯ ಶಾಲೆಯು ಮಾದರಿ ಶಾಲೆಯಾಗಿದ್ದು, ಈ ಶಾಲೆಯನ್ನು ಇನ್ನೂ ಹೆಚ್ಚಿನ ಆಭಿವೃದ್ಧಿ ಪಡಿಸಬೇಕು. ಗ್ರಾಮೀಣ ಭಾಗದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಕೃಪಾಂಕ ದೊರೆಯುತ್ತದೆ. ಶಾಲೆಯಲ್ಲಿ ಎಲ್ಲಾ ರೀತಿಯ ಸೌಲಭ್ಯ ಇದೆ. ವಿದ್ಯಾರ್ಥಿಗಳ ಬಗ್ಗೆ ಪೋಷಕರು ಹೆಚ್ಚು ಕಾಳಜಿ ವಹಿಸಕೊಳ್ಳಬೇಕು. ನನ್ನ ಸಹೋದರ ಮಾಧವ ರೈ 50ನೇ ವರ್ಷದ ಪುಣ್ಯ ಸ್ಮರಣಾರ್ಥ ಪುಸ್ತಕ ಕೊಡುಗೆಯನ್ನು ನೀಡಿದ್ದೇನೆ.
ಬೂಡಿಯಾರ್ ಪುರುಷೋತ್ತಮ ರೈ
ಸದಸ್ಯರು ಗ್ರಾ.ಪಂ, ಆರ್ಯಾಪು