ಮುರುಳ್ಯ: ಗೊಳ್ತಿಲ ಒಕ್ಕಲಿಗ ಸ್ವ ಸಹಾಯ ಸಂಘ ಉದ್ಘಾಟನೆ

0

ಕಾಣಿಯೂರು: ಮುರುಳ್ಯ ಗ್ರಾಮದ ಗೊಳ್ತಿಲ ಕೇಶವ ಗೌಡರ ತರವಾಡು ಮನೆಯಲ್ಲಿ ಗೊಳ್ತಿಲ ಎಂಬ ಹೆಸರಿನ ಒಕ್ಕಲಿಗ ಸ್ವ ಸಹಾಯ ಸಂಘವನ್ನು ಹಿರಿಯರಾದ ಕೇಶವ ಗೌಡರವರು ದೀಪ ಬೆಳಗಿಸಿ ಉದ್ಘಾಟಿದರು.

ಸಂಘದಲ್ಲಿ ಒಟ್ಟು 10ಜನ ಸದಸ್ಯರಿದ್ದು, ಪ್ರಬಂಧಕರಾಗಿ ಕೇಶವ ಗೌಡ, ಸಂಯೋಜಕರಾಗಿ ನೇತ್ರಾವತಿಯವರು ಆಯ್ಕೆಯಾದರು. ಈ ಸಂದರ್ಭದಲ್ಲಿ ಪುತ್ತೂರು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಹಾಗೂ ಸಲಹ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ ಕೆಯ್ಯೂರು, ಪ್ರೇರಕರಾದ ಗಣೇಶ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here