ಕೊಂಬೆಟ್ಟು : ಸರ್ಕಾರಿ ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ

0

ಪುತ್ತೂರು : ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ವತಿಯಿಂದ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕೊಂಬೆಟ್ಟು ಪುತ್ತೂರು ಮತ್ತು ಎನ್ ಸಿ.ಸಿ ಘಟಕದ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ ಮರಾಠಿ ಸಭಾಭವನದಲ್ಲಿ ನಡೆಯಿತು.


ಸಂಸ್ಥೆಯ ಉಪಪ್ರಾಂಶುಪಾಲ ವಸಂತ ಮೂಲ್ಯ ಅವರು ಮಾತನಾಡಿ ದೈಹಿಕ ಸಾಮರ್ಥ್ಯ ವರ್ಧನೆ, ಒತ್ತಡದಿಂದ ಮುಕ್ತಿ ಮತ್ತು ಮನಸ್ಸಿನ ಏಕಾಗ್ರತೆಗೆ ಯೋಗವು ಬಹಳ ಸಹಕಾರಿ. ಮಾನವನಿಗೆ ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ದೈಹಿಕ, ಮಾನಸಿಕ ಅಥವಾ ಸಾಮಾಜಿಕ ಸವಾಲುಗಳನ್ನು ಎದುರಿಸುವಾಗ ಸ್ವನಿಯಂತ್ರಣ ಯೋಗದಿಂದ ಪ್ರಾಪ್ತಿಯಾಗುತ್ತದೆ ಎಂದರು. ಸಂಸ್ಥೆಯ ಸುಮಾರು 650 ವಿದ್ಯಾರ್ಥಿಗಳು ಹಾಗೂ ಎಲ್ಲಾ ಶಿಕ್ಷಕರು ಸೂರ್ಯ ನಮಸ್ಕಾರ, ಯೋಗಾಸನ ಮತ್ತು ಪ್ರಾಣಾಯಾಮಗಳನ್ನು ಮಾಡಿ ಸಂತೃಪ್ತಭಾವವನ್ನು ಅನುಭವಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮತಿ ಜಾನೆಟ್ ಮತ್ತು ಶ್ರೀಮತಿ ಗೀತಾಂಜಲಿಯವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಯಿತು. ಎನ್.ಎನ್.ಸಿ ಅಧಿಕಾರಿ ಶ್ರೀ ಗ್ರೆಗೋರಿ ರೋನಿ ಪಾಯ್ಸ್ ಕಾರ್ಯಕ್ರಮದ ನೇತೃತ್ವ ವಹಿಸಿದರು. ಶ್ರೀಮತಿ ಗೀತಾಂಜಲಿ ವಂದಿಸಿದರು, ಕಲಾವಿದ ಶಿಕ್ಷಕ ಶ್ರೀ ಜಗನ್ನಾಥ ಅರಿಯಡ್ಕ ಸಹಕರಿಸಿದರು. ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷ ಶ್ರೀ ಜೋಕಿಂ ಡಿಸೋಜ, ಶಿಕ್ಷಣತಜ್ಞ ಶ್ರೀ ಸೇರ ಕೋಟಿಯಪ್ಪ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here