ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ

0

ಕಾಣಿಯೂರು : ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಕಾಣಿಯೂರಿನಲ್ಲಿ ಹತ್ತನೇ ವಿಶ್ವ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಜೂ 21ರಂದು ಆಚರಿಸಲಾಯಿತು. ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿಯವರು ವಹಿಸಿ ಶುಭ ಹಾರೈಸಿದರು. ಮುಖ್ಯಅತಿಥಿಗಳಾದ ಪುತ್ತೂರು ಯೋಗ ಕೇಂದ್ರದ ಅಧ್ಯಕ್ಷ, ನ್ಯಾಯವಾದಿಗಳೂ ಆಗಿರುವ ಗಿರೀಶ್ ಮಳಿರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಹೇಳಿದರು.

ಪುತ್ತೂರು ಯೋಗ ಕೇಂದ್ರದ ಗುರುಗಳಾದ ಡಾ. ಪ್ರಸಾದ್ ಪಾಣಾಜೆ ಅವರು ಮಾತನಾಡುತ್ತಾ ಯೋಗದಿಂದ ನಮ್ಮ ಶಾರೀರಿಕ ಹಾಗೂ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ ಒತ್ತಡ ರಹಿತ ಬದುಕನ್ನು ನಡೆಸಬಹುದು ಎಂದರು. ವಾಣಿಜ್ಯ ತೆರಿಗೆ ಅಧಿಕಾರಿಗಳಾದ ರಾಮಚಂದ್ರ ಐ , ಸೂರ್ಯನಾರಾಯಣ, ಮಂಜುಳಾ ಗಿರೀಶ್ ಮಳಿ, ಸಂಸ್ಥೆಯ ಸಹ ಆಡಳಿತಾಧಿಕಾರಿ ಹೇಮಾ ನಾಗೇಶ್ ರೈ , ಆಂಗ್ಲ ಮಾಧ್ಯಮದ ಮುಖ್ಯ ಗುರುಗಳಾದ ನಾರಾಯಣ ಭಟ್, ಆಂಗ್ಲ ಮಾಧ್ಯಮದ ಸಹಮುಖ್ಯಸ್ಥೆ ಅನಿತಾ ಜೆ ರೈ ಉಪಸ್ಥಿತರಿದ್ದರು.


ಶಾಲಾಡಳಿತಾಧಿಕಾರಿ ವಸಂತ ರೈ ಕಾರ್ಕಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು . ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿಯರಾದ ರಾಶಿ ಕೆ ಸಿ ಗ್ರೀಷ್ಮ ರೈ ಮಾನ್ವಿ ಜಿ ಎಸ್ ಪ್ರಾರ್ಥಿಸಿದರು .ಶಿಕ್ಷಕಿ ಶುಭಶ್ರೀ ಬಿ ಕೆ ಮತ್ತು ಶಿಕ್ಷಕ ಅಶೋಕ್ ಕುಮಾರ್ ಪಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ಸರಳ ಯೋಗಾಸನವನ್ನು ಯೋಗ ಶಿಕ್ಷಕಿ ಶಶಿಕಲಾ ರವರ ಮಾರ್ಗದರ್ಶನದೊಂದಿಗೆ ನಡೆಸಲಾಯಿತು. ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಿದ ಶಾಲಾ ವಿದ್ಯಾರ್ಥಿಗಳು ಯೋಗ ಪ್ರದರ್ಶನವನ್ನು ನೀಡಿದರು. ತದ ನಂತರ ಶಾಲಾ ಶಿಕ್ಷಕವೃಂದದವರು ಯೋಗಾಸನ ಮಾಡುವ ಮೂಲಕ ವಿಶ್ವಯೋಗ ದಿನಾಚರಣೆಯನ್ನು ಆಚರಿಸಿದರು.

LEAVE A REPLY

Please enter your comment!
Please enter your name here