ಕೊಯಿಲ ಬಡಗನ್ನೂರು ಶಾಲೆಯಲ್ಲಿ ಯೋಗದಿನಾಚರಣೆ

0

ಬಡಗನ್ನೂರು: ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕೊಯಿಲ ಬಡಗನ್ನೂರು ಇಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಯೋಗ ಎಂಬ ಶೀರ್ಷಿಕೆಯಡಿಯಲ್ಲಿ ಕರ್ನಾಟಕ ಸರಕಾರದ ಆಯುಷ್ ಇಲಾಖೆಯ ಯೋಗಾಭ್ಯಾಸದ ಕ್ರಮಪಟ್ಟಿಯಂತೆ, ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಶಿಥಿಲೀಕರಣ ವ್ಯಾಯಾಮ, ಯೋಗಾಸನ, ಪ್ರಾಣಾಯಾಮ, ಧ್ಯಾನ ಅಭ್ಯಾಸ ಮಾಡಿದರು. ಶಾಲಾ ಸಹ ಶಿಕ್ಷಕ ಗಿರೀಶ್ ಡಿ ಯವರ ಮಾರ್ಗದರ್ಶನದಲ್ಲಿ  ಯೊಗ ಅಭ್ಯಾಸ ನಡೆಯಿತು. ಮುಖ್ಯೋಪಾಧ್ಯಾಯರಾದ ಪುಷ್ಪಾವತಿ ಎಂ.ಬಿ ಯೋಗದ ಮಹತ್ವವನ್ನು ತಿಳಿಸಿ ಯೋಗ ದಿನದ ಸಂಕಲ್ಪವನ್ನು ಮಕ್ಕಳಿಗೆ ವಾಚಿಸಿದರು. ಪದವೀಧರ ಶಿಕ್ಷಕಿ ಸೌಮ್ಯ ವಂದಿಸಿದರು. ಅತಿಥಿ ಶಿಕ್ಷಕಿ ಸರಳ ಸಹಕರಿಸಿದರು.

LEAVE A REPLY

Please enter your comment!
Please enter your name here