ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಿಶ್ವಯೋಗ ದಿನಾಚರಣೆ

0

ಪುತ್ತೂರು: ಯೋಗಾಭ್ಯಾಸವು ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಸಾಧನ. ಯೋಗದ ನಿರಂತರ ಅಭ್ಯಾಸದಿಂದ ಮನೋನಿಯಂತ್ರಣ, ಇಂದ್ರಿಯ ನಿಗ್ರಹ, ಅಧಿಕ ಕಾರ್ಯೋತ್ಸಾಹ ಮೊದಲಾದ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬಹುದು. ಪಾರಮಾರ್ಥಿಕ ಸತ್ಯದೆಡೆಗೆ, ಆತ್ಮದ ಅರಿವನ್ನು ಪಡೆಯುವುದರೆಡೆಗೆ ಸಾಗಲು ಮನುಷ್ಯರಿಗೆ ನೆರವಾಗುವಂತದ್ದೆಲ್ಲವೂ ಯೋಗವೇ ಎಂದು ಪುತ್ತೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಯೋಗ ಶಿಕ್ಷಕಿ ಶರಾವತಿ ಹೇಳಿದರು.

ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ವಿಶ್ವಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಯೋಗದ ಪ್ರಾಮುಖ್ಯತೆಯನ್ನು ತಿಳಿಸುತ್ತಾ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್‌ ಮಾತನಾಡಿ, ವಾಸ್ತವವಾಗಿ ಯೋಗ ಎಂಬುದು ಶರೀರ, ಮನಸ್ಸು ಮತ್ತು ಆತ್ಮದ ಒಂದು ಕನ್ನಡಿಯಾಗಿ ವರ್ತಿಸುತ್ತದೆ ಹಾಗೂ ನಮ್ಮನ್ನು ನಾವು ಕಂಡು ಕೊಳ್ಳುವುದಕ್ಕೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. ಜೀವನದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದ ,ಸಂತೋಷ, ಯಶಸ್ಸು ಎಲ್ಲವೂ ಕೈಗೂಡಬೇಕೆಂದರೆ ಯೋಗಾಭ್ಯಾಸವು ಅನಿವಾರ್ಯವಾಗಿರುತ್ತದೆ”ಎಂದು ಹೇಳಿದರು.
ಕಾರ್ಯಕ್ರಮದ ಬಳಿಕ ವಿವಿಧ ಯೋಗಾಸನದ ಪ್ರಕಾರಗಳನ್ನು ವಿದ್ಯಾರ್ಥಿಗಳಿಗೆ ಶರಾವತಿ ತಿಳಿಸಿದರು. ಕಾರ್ಯಕ್ರಮದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾದ ಕು. ಆಶಿಕಾ ರಾವ್‌ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here