ಎಸ್.ಎಸ್.ಎಲ್.ಸಿ ಪರೀಕ್ಷೆ: ವಿಷಯವಾರು ಶಿಕ್ಷಕರ ಆಯ್ಕೆ-ಕಂಟ್ರಮಜಲಿನ ಮಹೇಶ್ ಕೆ.ಪಿ ಕನ್ನಡದಲ್ಲಿ ರಾಜ್ಯಕ್ಕೆ ಪ್ರಥಮ- ಸಿಎಂ ಗೌರವ

0

ಕಾವು: 2023-24 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಬರುವ 798 ವಸತಿ ಶಾಲೆಗಳಲ್ಲಿ ,ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಮ್ಮಾಜೆ, ಮೆನ್ನಬೆಟ್ಟು ಕಿನ್ನಿಗೋಳಿ ,ಮಂಗಳೂರು ಇಲ್ಲಿನ ಕನ್ನಡ ಭಾಷಾ ಶಿಕ್ಷಕ ಮಹೇಶ್ ಕೆ .ಪಿ ರವರು ತಮ್ಮ ಕನ್ನಡ ವಿಷಯದಲ್ಲಿ ಅತಿ ಹೆಚ್ಚು (ಸರಾಸರಿ 97.30% ಶೇಕಡವಾರು) ಫಲಿತಾಂಶವನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಪದಕವನ್ನು ನೀಡಿ ಇವರನ್ನು ಗೌರವಿಸಿದರು.ಮಹೇಶ್ ಕೆ.ಪಿ ರವರು ಕೊಳ್ತಿಗೆ ಗ್ರಾಮದ ಕಂಟ್ರಮಜಲು ಪದ್ಮನಾಭ ಗೌಡ ಹಾಗೂ ಯಶೋಧ ದಂಪತಿಯ ಪುತ್ರ.

LEAVE A REPLY

Please enter your comment!
Please enter your name here