ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ 10ನೇ ವರ್ಷದ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.
ಖ್ಯಾತ ಯೋಗ ತರಬೇತುದಾರರಾದ ವಿಜೇಶ್ರವರು ವಿದ್ಯಾರ್ಥಿಗಳಿಗೆ ಯೋಗಭ್ಯಾಸದ ಕುರಿತಾಗಿ ಮಾಹಿತಿಯನ್ನು ನೀಡಿದರು. ’ಸ್ವಯಂ ಮತ್ತು ಸಮಾಜಕ್ಕಾಗಿ’ ಯೋಗ ಎಂಬ ಈ ವರ್ಷದ ಪರಿಕಲ್ಪನೆಯ ಅಡಿಯಲ್ಲಿ ಯೋಗ ಪ್ರದರ್ಶನವನ್ನು ನೆರವೇರಿಸಲಾಯಿತು. ತರಬೇತುದಾರ ವಿಜೇಶ್ರವರಿಗೆ ಸಂಸ್ಥೆಯ ವತಿಯಿಂದ ಪ್ರಾಂಶುಪಾಲರು ಶಾಲು ಹಾಕಿ ಗೌರವಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲ, ದೈಹಿಕ ಶಿಕ್ಷಣ ಉಪನ್ಯಾಸಕ ಗಣೇಶ್ರವರು ಯೋಗ ಶಿಕ್ಷಣ ನೀಡಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಕೆ, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕರಾದ ಸತೀಶ್ ಭಟ್ ಬಿಳಿನೆಲೆ ಮತ್ತು ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.