ನೆಲ್ಯಾಡಿ: ಇಲ್ಲಿನ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಜೂ.21ರಂದು ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.
ಅತಿಥಿಯಾಗಿದ್ದ ಡಾ.ಅನಿಶ್ ಕುಮಾರ್ರವರು ಮಾತನಾಡಿ, ಯೋಗ ಎಂಬುದು ಬರೀ ಆಸನವಲ್ಲ. ಅದು ಒಂದು ಜೀವನ ಕ್ರಮ. ನಾವು ಸಮಾಜದಲ್ಲಿ ಹೇಗಿರಬೇಕು, ನಮ್ಮನ್ನು ನಾವು ಹೇಗೆ ಸಮಾತೋಲನದಲ್ಲಿ ಇಟ್ಟುಕೊಳ್ಳಬೇಕು ಎಂಬ ಅಂಶಗಳನ್ನು ಯೋಗದಿಂದ ಕಲಿಯಬೇಕು. ಯೋಗವೆಂಬುದು ಯೋಗ ದಿನಕ್ಕೆ ಸೀಮಿತವಾಗಿರದೇ ಅದು ನಿತ್ಯ ಯೋಗವಾಗಿರಬೇಕು ಎಂದು ಹೇಳಿದರು. ವಿದ್ಯಾಸಂಸ್ಥೆಗಳ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಉಪನ್ಯಾಸಕರಾದ ಮಹಮ್ಮದ್ ಹ್ಯಾರಿಸ್ ಹಾಗೂ ಕನ್ನಡ ಉಪನ್ಯಾಸಕರಾದ ಚೇತನ್ ಕುಮಾರ್ ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಮೂಡಿಬಂತು. ಕಾರ್ಯಕ್ರಮದಲ್ಲಿ ಸಂಚಾಲಕರಾದ ರೆ. ಫಾ. ನೋಮಿಸ್ ಕುರಿಯಾಕೋಸ್, ವಿದ್ಯಾಸಂಸ್ಥೆಗಳ ಮುಖ್ಯಸ್ಥರು, ಉಪನ್ಯಾಸಕ ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.