ಸವಣೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನಾಚರಣೆ

0

ಪುತ್ತೂರು‌: ಸವಣೂರು‌ ಉ ಹಿ ಪ್ರಾಥಮಿಕ ಶಾಲೆ ಇಲ್ಲಿ ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯನ್ನು ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು.”ಯೋಗದಿಂದ ನಾವು ರೋಗಗಳಿಂದ ಮುಕ್ತರಾಗಬಹುದು ಎಂದು ಹೇಳಿ ಮಕ್ಕಳಿಗೆ ಶುಭ ಹಾರೈಸಿದರು.

ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಮಹಮ್ಮದ್ ಹನೀಫ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.ವೇದಿಕೆಯಲ್ಲಿ ಸವಣೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ರಾಜೀವಿ ವಿ ಶೆಟ್ಟಿ, ಚಂದ್ರಾವತಿ ಸುಣ್ಣಾಜೆ,ಸವಣೂರು ಆರೋಗ್ಯ ಕೇಂದ್ರದ ಸಿ ಎಚ್ ಒ ಸುಶ್ಮಿತ,ಶಾಲಾ ಮುಖ್ಯ ಗುರುಗಳಾದ ನಿಂಗರಾಜು ಕೆ ಪಿ,ಶಾಲಾ ವಿದ್ಯಾರ್ಥಿ ನಾಯಕ ಮಹಮ್ಮದ್ ಆದಿಲ್ ,ಉಪನಾಯಕಿ ಕು ಲಿಶ ಸಿ ಪಿ ಉಪಸ್ಥಿತರಿದ್ದರು. ಮುಖ್ಯ ಗುರು ನಿಂಗರಾಜು ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಕೆ ಕಾರ್ಯಕ್ರಮ ನಿರೂಪಿಸಿ ಯೋಗಾಸನ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲಾ ಶಿಕ್ಷಕ ಗಣೇಶ್ ಟಿ ಎಮ್ ವಂದಿಸಿದರು.ಶಿಕ್ಷಕರಾದ ತುಳಸಿ ಎಚ್, ಮೇಬಲ್ ರೋಡ್ರಿಗಸ್,ಅತಿಥಿ ಶಿಕ್ಷಕರಾದ ಅಶ್ವಿನಿ, ದಿವ್ಯ,ಸುಪ್ರಿಯ ಮತ್ತು ಮಿಶ್ರಿಯ ಸಹಕರಿಸಿ,ಯೋಗಾಸನದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here