ಕುಂತೂರು: ಇಲ್ಲಿನ ಮಾರ್ ಇವಾನಿಯೋಸ್ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಯೋಗ ಪಟು ವಿಜೇಶ್ ಬಿಳಿನೆಲೆ, ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡುತ್ತಾ, ಪ್ರತಿದಿನವೂ ಯೋಗ ಅಭ್ಯಾಸಗಳನ್ನು ಮಾಡುವುದರಿಂದ ಲಭಿಸುವ ಪ್ರಯೋಜನಗಳ ಕುರಿತಾಗಿ ವಿವರಿಸಿದರು .
ಪ್ರಶಿಕ್ಷಣಾರ್ಥಿಗಳಾದ ಹನುಮಂತ ಎಸ್ ಎಸ್, ಶಿಲ್ಪ, ಕೀರ್ತಿ ಯೋಗ ದಿನಾಚರಣೆಯ ಕುರಿತು ಸಂಕ್ಷಿಪ್ತವಾಗಿ ಮಾತನಾಡಿದರು .ಕಾಲೇಜಿನ ಪ್ರಾಂಶುಪಾಲೆ ಉಷಾ ಎಂ. ಎಲ್ ಅವರು ಸಂದರ್ಬೋಚಿತವಾಗಿ ಮಾತನಾಡಿದರು.ಕಾಲೇಜಿನ ವ್ಯವಸ್ಥಾಪಕರಾದ ರೆ| ಫಾ| ಡಾ| ಎಲ್ದೋ ಪುತ್ತನ್ ಕಂಡತ್ತಿಲ್ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಪ್ರಶಿಕ್ಷಣಾರ್ಥಿ ಶ್ರೀವೀಣಾ ಅತಿಥಿಗಳ ಕುರಿತು ಕಿರು ಪರಿಚಯ ನೀಡಿದರು.ಕಾಲೇಜಿನ ಉಪನ್ಯಾಸಕ ಹರೀಶ್ ಕುಮಾರ್ ಟಿ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ಪ್ರಶಿಕ್ಷಣಾರ್ಥಿ ಜಯಶ್ರೀ ಎ ವಂದಿಸಿದರು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. ಯೋಗ ತರಬೇತಿದಾರ ವಿಜೇಶ್ ಬಿಳಿನೆಲೆ ಇವರ ಮಾರ್ಗದರ್ಶನದಲ್ಲಿ ಪ್ರತಿಕ್ಷಣಾರ್ಥಿಗಳಿಗೆ ವಿವಿಧ ಭಂಗಿಗಳ ಯೋಗಭ್ಯಾಸದ ಕಾರ್ಯಕ್ರಮವು ನಡೆಯಿತು.