ಎಸ್ ಸಿ ಐ ಪುತ್ತೂರು ವತಿಯಿಂದ ಪುಸ್ತಕ ವಿತರಣೆ

0

ಪುತ್ತೂರು: ಸಂಟ್ಯಾರು ಉನ್ನತ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿನ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜನ್ ಹಾಗೂ ಸ್ಪಂದನ ಟ್ರಸ್ಟ್ ವತಿಯಿಂದ ಸುಮಾರು ₹10000 /- ಮೌಲ್ಯದ ಪೆನ್ ಮತ್ತು ನೋಟ್ ಪುಸ್ತಕಗಳ ವಿತರಣೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಅಧ್ಯಕ್ಷೆ ಮಲ್ಲಿಕಾ ಜೆ ಆರ್ ರೈ, ಕಾರ್ಯದರ್ಶಿ ರೋಹಿಣಿ ಆಚಾರ್ಯ, ಕೋಶಾಧಿಕಾರಿ ಸುಮಂಗಲ ಶಣೈ ಶಾರದಾ ಪ್ರಭು , ಸ್ಪಂದನ ಟ್ರಸ್ಟ್ ನ ಅಧ್ಯಕ್ಷೆ ಸುಮಿತ್ರ, ಕೋಶಾಧಿಕಾರಿ ಕಾವ್ಯ, ಸದಸ್ಯ ಅವಿನಾಶ್ , ಎಸ್ ಡಿ ಎಂ ಸಿ ಅಧ್ಯಕ್ಷ ಬಾಬು ಮರಿಕೆ, ನಿಕಟಪೂರ್ವ ಅಧ್ಯಕ್ಷರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ವಿಶೇಷವಾಗಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷೆ ಮಲ್ಲಿಕಾ ಜೆ ಆರ್ ರೈ ಅವರ ಪ್ರಾಯೋಜಕತ್ವದಲ್ಲಿ ಪೆನ್ ವಿತರಿಸಲಾಯಿತು.

LEAVE A REPLY

Please enter your comment!
Please enter your name here