ಗೌರವಾಧ್ಯಕ್ಷ: ಸೀತಾರಾಮ ರೈ ಕೆದಂಬಾಡಿಗುತ್ತು |ಅಧ್ಯಕ್ಷ: ಪಿ.ಜಿ. ಜಗನ್ನಿವಾಸ್ ರಾವ್ |ಪ್ರ. ಕಾರ್ಯದರ್ಶಿ: ಜಯಂತ್ ಉರ್ಲಾಂಡಿ | ಕೋಶಾಧಿಕಾರಿ: ತಾರನಾಥ್ ಹೆಚ್.
ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದ ಮಹಾಸಭೆಯು ಜೂ.23ರಂದು ಬೆಳಿಗ್ಗೆ ಭಜನಾ ಮಂದಿರದಲ್ಲಿ ನಡೆಯಿತು.
ನೂತನ ಸಮಿತಿ ರಚನೆಯಲ್ಲಿ ಅಧ್ಯಕ್ಷರಾಗಿ ವಾಸ್ತು ಇಂಜಿನಿಯರ್ ಪಿ.ಜಿ. ಜಗನ್ನಿವಾಸ ರಾವ್, ಗೌರವಾಧ್ಯಕ್ಷರಾಗಿ ಪದ್ಮಾಶ್ರೀ ಸೋಲಾರ್‌ನ ಮಾಲಕ, ಉದ್ಯಮಿ, ಸೀತಾರಾಮ ರೈ ಕೆದಂಬಾಡಿಗುತ್ತು ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ದಯಾನಂದ ಆದರ್ಶ, ಯಶವಂತ ಆಚಾರ್ಯ, ಪ್ರಧಾನ ಕಾರ್ಯದರ್ಶಿಯಾಗಿ ಜಯಂತ ಉರ್ಲಾಂಡಿ, ಜತೆ ಕಾರ್ಯದರ್ಶಿಗಳಾಗಿ ಸುಧೀರ್ ಕಲ್ಲಾರೆ, ಜಲಜಾಕ್ಷಿ ಹೆಗ್ಡೆ, ಕೋಶಾಧಿಕಾರಿಯಾಗಿ ತಾರನಾಥ್ ಹೆಚ್, ಗೌರವ ಸಲಹೆಗಾರರಾಗಿ ರಮೇಶ್ ಬಾಬು, ಗೋಪಾಲ್ ನಾಯ್ಕ, ರಾಜೇಶ್ ಬನ್ನೂರು, ಸಾಯಿರಾಮ ರಾವ್, ಪಿ.ಕೆ. ಗಣೇಶ್, ರಮಾನಂದ ರಾವ್, ರಾಧಾಕೃಷ್ಣ ನಂದಿಲ, ಕಿಟ್ಟಣ್ಣ ಗೌಡರವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಂದಿರದ ಅರ್ಚಕ ಹರಿಪ್ರಸನ್ನ ಸರೋಳಿತ್ತಾಯ, ದೇವಾಲಯಗಳ ಅಧ್ಯಯನಕಾರ ಚಂದ್ರಶೇಖರ ರಾವ್ ಪಿ.ಜಿ., ಟಿ. ಪ್ರೇಮಲತಾ ರಾವ್, ಫಕೀರ ಗೌಡ, ಶ್ರೀಧರ ಆಚಾರ್ಯ, ಗುಲಾಬಿ ಗೌಡ, ವಸಂತ ಕುಮಾರ್, ಗುಲಾಬಿ ಕಂಬಳಕೋಡಿ, ಹರಿಣಿ ಗೌಡ, ಕರಣ್ ಗೌಡ, ಅರ್ಜುನ್ ಗೌಡ, ಪದ್ಮನಾಭ ಹಂದ್ರಟ್ಟ, ಪುಷ್ಪರಾಜ್ ಹೆಗ್ಡೆ, ಕೃಷ್ಣ ಮಚ್ಚಿಮಲೆ, ಜಯಕಿರಣ್, ಗೋಪಾಲ ಆಚಾರ್ಯ, ಗಣಪತಿ ನಾಯಕ್ ಕಲ್ಲಾರೆ, ಅಶೋಕ್ ಕುಂಬ್ಲೆ, ಪ್ರಜ್ನೇಶ್, ಪ್ರಜ್ವಲ್, ಸತೀಶ್ ಬಲ್ಯಾಯ, ಯೋಗಾನಂದ ಉರ್ಲಾಂಡಿ, ಹೆಚ್. ವಿಜಯಾ, ವಸಂತ ರಾವ್, ಲಿಂಗಪ್ಪ ಗೌಡ ಆಯ್ಕೆಯಾದವರು.
ಬೆನ್ನುತಟ್ಟಿ ಪ್ರೋತ್ಸಾಹ ಕೊಟ್ಟಿರುವ ಸಮಿತಿಯಿದ್ದರೆ ಅದು ಶಾರದೋತ್ಸವ ಸಮಿತಿ: ಗೌರವಾಧ್ಯಕ್ಷರಾಗಿ ಆಯ್ಕೆಯಾದ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ ಯಾವುದಾದರೊಂದು ಒಳ್ಳೆಯ ಕೆಲಸ ಮಾಡುವುದಿದ್ದಲ್ಲಿ ಅದನ್ನು ಮಾಡಲಿ ಎಂದು ಬೆನ್ನುತಟ್ಟಿ ಪ್ರೋತ್ಸಾಹ ಕೊಟ್ಟಿರುವ ಸಮಿತಿ ಇದ್ದರೆ ಅದು ಶಾರದೋತ್ಸವ ಸಮಿತಿಯಾಗಿದೆ, ಕಳೆದ ವರ್ಷ ಪುತ್ತೂರು ಶಾರದೋತ್ಸವದಲ್ಲೂ ಸಂಚಾಲಕತ್ವದ ಸ್ಥಾನ ನೀಡಿದ್ದೀರಿ, ಈಗ ಮಂದಿರದ ಗೌರವಾಧ್ಯಕ್ಷ ಸ್ಥಾನದ ಅವಕಾಶ ನೀಡಿದ್ದೀರಿ, ಆ ಅವಕಾಶಕ್ಕೆ ಯಾವುದೇ ರೀತಿ ಚ್ಯುತಿ ಬರದ ಹಾಗೆ ಮಂದಿರದಲ್ಲಿ ಮುಂದೆ ಏನಾದರೂ ಸಂಕಲ್ಪ ಮಾಡಿ ಒಳ್ಳೆಯ ಕಾರ್ಯ ಮಾಡುವುದಿದೆಯೋ ಅದಕ್ಕೆ ನನ್ನಿಂದ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸ ಇದ್ದರೆ ನನ್ನ ಪೂರ್ಣ ಸಹಕಾರ ಇದೆ, ಈ ಮಂದಿರ ಭವ್ಯ ಮಂದಿರ ಮಾಡಬೇಕು ಎನ್ನುವ ಸಂಕಲ್ಪ ಅಧ್ಯಕ್ಷರಲ್ಲಿದೆ, ಅದನ್ನು ನರವೇರಿಸಲು ಶ್ರೀ ಶಾರದಾ ಮಾತೆ ಅನುಗ್ರಹದ ದೀಕ್ಷೆ ಕೊಟ್ಟರೆ ಎಲ್ಲರ ಸಹಕಾರದೊಂದಿಗೆ ನಿರ್ಮಿಸೋಣ ಎಂದರು.
ಇಲ್ಲಿ ಭವ್ಯ ಮಂದಿರ ನಿರ್ಮಾಣವಾಗಬೇಕು: ನೂತನ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್ ಮಾತನಾಡಿ ಹೊಸ ಪದಾಧಿಕಾರಿಗಳಿಗೆ ೩ ವರ್ಷದ ಅಧಿಕಾರಾವಧಿಯಿದೆ. ಈ ಅವಧಿಯಲ್ಲಿ ದೇವರಿಗೆ ಏನೆಲ್ಲಾ ಸೇವೆಯನ್ನು ಸಲ್ಲಿಸಲು ಅನುಕೂಲವಿದೆಯೋ ಅದನ್ನು ಮಾಡಬೇಕು, ಮುಂದಕ್ಕೆ ಎಲ್ಲರಿಗೂ ಅವಕಾಶ ಸಿಗುತ್ತದೆ ಈ ೩ ವರ್ಷದಲ್ಲಿ ಮೊದಲ ಸಂಕಲ್ಪವಾಗಿ ಮಂದಿರವನ್ನು ನೂತನ ನಿರ್ಮಾಣ ಮಾಡಲು ಅದಕ್ಕೆ ಬೇಕಾದ ನಕ್ಷೆಗಳನ್ನು, ವಿಜ್ಞಾಪನಾ ಪತ್ರ ತಯಾರಿಸಿ ದೈವಜ್ಞರನ್ನು, ತಂತ್ರಿಯವರನ್ನು ಸಂಪರ್ಕಿಸುವುದು, ಹಾಗೆಯೇ ದೇವಸ್ಥಾನದ ಅಭಿಪ್ರಾಯದಂತೆ ದೇವಸ್ಥಾನದ ಒಂದು ಭಾಗದಲ್ಲಿ ಮಂದಿರ, ಇನ್ನೊಂದು ಭಾಗದಲ್ಲಿ ದೇವಸ್ಥಾನದ ಶಾಲೆ ಮತ್ತು ರಥದ ಕೊಟ್ಟಿಗೆ ಅದನ್ನು ಒಟ್ಟಾಗಿ ರಚನೆ ಮಾಡಿ ವಿನ್ಯಾಸ ಮಾಡುವ ಸಲಹೆ ದೇವಸ್ಥಾನದಿಂದ ಬಂದಿದೆ. ಇದರ ಖರ್ಚು ವೆಚ್ಚ ಮಂದಿರದ ವತಿಯಿಂದ ಆಗಬೇಕಾಗಿದ್ದು ವಿನ್ಯಾಸ ಒಂದೇ ತರಹವಿರುತ್ತದೆ ಇದೂ ದೇವಸ್ಥಾನದ ಸಮಿತಿಯ ಅಭಿಪ್ರಾಯವಾಗಿದೆ ಇದನ್ನು ನಮ್ಮ ಸಮಿತಿ ಮೂಲಕ ದೇವಸ್ಥಾನದ ಮುಂದಿನ ಸಮಿತಿಯವರೊಂದಿಗೆ ಚರ್ಚಿಸುವ ಕುರಿತು ಆಲೋಚನೆ ಇದೆ ಎಂದ ಅವರು ಮೂರು ವರ್ಷದ ಅಧ್ಯಕ್ಷತೆಯ ಅವಧಿಯಲ್ಲಿ ಇದನ್ನು ನಡೆಸುವ ಟಾರ್ಗೆಟ್ ಇಟ್ಟುಕೊಂಡು ಕೆಲಸ ಮಾಡುವುದಾಗಿ ತಿಳಿಸಿದರು. ಮಂದಿರಕ್ಕೆ ನೂರು ವರ್ಷ ತುಂಬುವಾಗಿ ಇಲ್ಲಿ ಭವ್ಯ ಮಂದಿರ ನಿರ್ಮಾಣವಾಗಬೇಕು ಎನ್ನುವ ಆಶಯದೊಂದಿಗೆ ಇದನ್ನು ಒಪ್ಪಿಕೊಂಡಿzನೆ ಎಂದರು.
ಸನ್ಮಾನ: ಕಳೆದ 13 ವರ್ಷಗಳಿಂದ ಮಂದಿರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸಾಯಿರಾಮ ರಾವ್‌ರವರನ್ನು ಸನ್ಮಾನಿಸಲಾಯಿತು. ಜಯಂತ ಉರ್ಲಾಂಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತಾರನಾಥ್ ಹೆಚ್. ಲೆಕ್ಕಪತ್ರ ಮಂಡಿಸಿ ವಂದಿಸಿದರು.
ಹರಿಣಿ ಗೌಡ, ಕರಣ್ ಗೌಡ ಪ್ರಾರ್ಥಿಸಿದರು, ಜಯಂತ ಉರ್ಲಾಂಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತಾರನಾಥ್ ಹೆಚ್. ಲೆಕ್ಕಪತ್ರ ಮಂಡಿಸಿ ವಂದಿಸಿದರು. ಸಂಜೆ ಮಂದಿರದಲ್ಲಿ ಧೀಶಕ್ತಿ ಮಹಿಳಾ ಯಕ್ಷಬಳಗ ತೆಂಕಿಲ ಇವರಿಂದ ಸುಗ್ರೀವಾಜ್ಞೆ ಎಂಬ ಯಕ್ಷಗಾನ ತಾಳಮದ್ದಳೆ ಜರಗಿತು.