ಸವಣೂರು : ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ಮಿಯಾವಾಕಿ ಜಪಾನ್ ಶೈಲಿಯ ಶಾಲೆಗೊಂದು ವನ ಕಲ್ಪನೆಯಂತೆ ಒಂದು ಸಾವಿರ ವಿವಿಧ ಜಾತಿಯ ಹಣ್ಣಿನ ಗಿಡ ಮತ್ತು ಇತರ ಗಿಡಗಳನ್ನು ನೆಡುವ ಕಾರ್ಯಕ್ರಮ ರವಿವಾರ ನಡೆಯಿತು.
ಪ್ರತಿಯೊಂದು ಮಗುವಿನ, ಹಿರಿಯ ವಿದ್ಯಾರ್ಥಿಗಳ, ಪೋಷಕರ ಕೈಯಲ್ಲಿ ಒಂದೊಂದು ಗಿಡ, ನೂರಾರು ಜಾತಿಯ ಹಣ್ಣಿನ ಗಿಡಗಳು ಜಂಬು ನೇರಳೆ, ಪೇರಳೆ, ನೇರಳೆ, ರಂಬ್ಟನ್,ಮಾವು,ಚಿಕ್ಕು ಹಲಸು, ನೆಲ್ಲಿ ಹೀಗೆ.. ನೂರಾರು ಜಾತಿಯ ಸಸಿಗಳು ಶ್ರೀಗಂಧ,ಕಕ್ಕೆ ಸಾಗುವಾನಿ. ಮಾಗುವನಿ ,ಹುಳಿ ಇತ್ಯಾದಿ ಒಂದು ಸಾವಿರಕ್ಕಿಂತಲೂ ಮಿಕ್ಕಿದ ವಿವಿಧ ಜಾತಿಯ ಹಣ್ಣಿನ ಗಿಡಗಳು ಮತ್ತು ಇತರೆ ಗಿಡಗಳನ್ನು ಕ್ರೆಂಚ್ ಮಾಡಿ ನೀಡಲಾಯಿತು.
ಮಿಯಾವಾಕಿ ಜಪಾನ್ ಕ್ರಮದಲ್ಲಿ ಶಾಲೆಗೊಂದು ವನ ಎಂಬ ವಿಶೇಷವಾದ ಕಲ್ಪನೆಯಲ್ಲಿ ವನ ಚಾರಿಟೇಬಲ್ ಟ್ರಸ್ಟ್ ನ ಪ್ರಮುಖರಾದ ಜೀತ್ ರೋಚೆ ಇವರ ನಿರ್ದೇಶನದಲ್ಲಿ ಮಹೇಶ್ ಕುಂಜೂರು ಪಂಜ ಇವರ ಸಂಯೋಜನೆಯಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಶಾಲಾ ಮುಖ್ಯಗುರು ತಾರಾನಾಥ ಸವಣೂರು ಇವರ ಮಾರ್ಗದರ್ಶನದಲ್ಲಿ ಊರವರು ಪೋಷಕರು ಹಳೆ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಸುಮಾರು 250 ಕ್ಕಿಂತಲೂ ಹೆಚ್ಚಿನ ನಾಗರಿಕರು ಬಂದು ಏಕಕಾಲದಲ್ಲಿ ಶಾಲೆಗೊಂದು ವನ ನಿರ್ಮಾಣ ಮಾಡಿದರು. ನಮ್ಮ ಶಾಲೆ ನಮ್ಮ ವನದ ಸಂಪೂರ್ಣ ಖರ್ಚು ವೆಚ್ಚ ಮತ್ತು ಗಿಡಗಳ ಉಸ್ತುವಾರಿಯನ್ನು ವನ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರು ವಹಿಸಲಿದ್ದು ಇದರ ಮುಖ್ಯಸ್ಥರಾದ ಜೀತ್ ರೋಚೆ ಇವರಿಗೆ ಶಾಲು ನೀಡಿ ಗೌರವಿಸಲಾಯಿತು. ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಅನುಪಮ ಮತ್ತು ಶಾಲಾ ಮುಖ್ಯ ಗುರು ತಾರಾನಾಥ ಸವಣೂರು ಅವರು ಅಭಿನಂದನೆಯನ್ನು ಸಲ್ಲಿಸಿದರು.