ಪುತ್ತೂರಿನ ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿಯಲ್ಲಿ ಫ್ಲ್ಯಾಟ್ ಫಿಪ್ಟಿ ಪರ್ಸೆಂಟ್ ಡಿಸ್ಕೌಂಟ್ ಆಫರ್ ಗೆ ಚಾಲನೆ

0

ಸಂಸ್ಥೆಯಲ್ಲಿ ಮನೆಯ ವಾತಾವರಣ – ಸಿಬ್ಬಂದಿಗಳಿಂದ ಜನಸ್ನೇಹಿ ಸೇವೆ: ಶ್ರೀಲತಾ

ಪುತ್ತೂರು: ಸದಾ ಒಂದಲ್ಲ ಒಂದು ರೀತಿಯ ಕೊಡುಗೆಗಳನ್ನು ನೀಡುತ್ತಾ ಗ್ರಾಹಕ ಸ್ನೇಹಿ ವ್ಯವಹಾರವನ್ನು ನಡೆಸುತ್ತಿರುವ ಪುತ್ತೂರಿನ ಕೆ.ಎಸ್.ಆರ್.ಟಿ.ಸಿ. ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ವ್ಯವಹಾರ ನಡೆಸುತ್ತಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಅಲುಕಾಸ್ ನಲ್ಲಿ ಫ್ಲ್ಯಾಟ್ ಫಿಪ್ಟಿ ಪರ್ಸೆಂಟ್ ಡಿಸ್ಕೌಂಟ್ ಆಫರ್ ಆರಂಭಗೊಂಡಿದೆ.

ನರಿಮೊಗರು ಸ.ಹಿ.ಪ್ರಾ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಲತಾ ರವರು ದೀಪ ಬೆಳಗಿಸುವ ಮೂಲಕ ಫ್ಲ್ಯಾಟ್ ಫಿಪ್ಟಿ ಪರ್ಸೆಂಟ್ ಡಿಸ್ಕೌಂಟ್ ಆಫರ್ ಗಳಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ನಾವು ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆಯೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದೇವೆ. ಆರಂಭದಲ್ಲಿ ಸಣ್ಣ ಆಭರಣವನ್ನು ಖರೀದಿ ಮಾಡಲು ಬಂದಿರುವ ನಾನು ಇದೀಗ ವಜ್ರಾಭರಣವನ್ನು ಇಲ್ಲೇ ಖರೀದಿ ಮಾಡುವ ಹಂತಕ್ಕೆ ಬಂದಿದ್ದೇನೆ. ಉತ್ತಮ ಮನೆಯ ವಾತಾವರಣವನ್ನು ಸಂಸ್ಥೆ ಸೃಷ್ಟಿಸಿದ್ದು, ಸಿಬ್ಬಂದಿಗಳ ಜನಸ್ನೇಹಿ ಸೇವೆಯೇ ಸಂಸ್ಥೆ ಗ್ರಾಹಕರನ್ನು ಮತ್ತಷ್ಟು ಅಕರ್ಷಿಸಲು ಕಾರಣವಾಗಿದೆ ಎಂದರು.

ಫ್ಲ್ಯಾಟ್ ಫಿಪ್ಟಿ ಪರ್ಸೆಂಟ್ ಡಿಸ್ಕೌಂಟ್ ಆಫರ್ ನ ಸಂದರ್ಭದಲ್ಲಿ ಚಿನ್ನಾಭರಣ ಕೊಳ್ಳುವಾಗ ಮೇಕಿಂಗ್ ಚಾರ್ಜಸ್ ಮೇಲೆ 50% ಡಿಸ್ಕೌಂಟ್ ಲಭಿಸಲಿದೆ.
ಹೆಚ್ಚಿನ ಲಾಭದೊಂದಿಗೆ ನಿಮ್ಮ ಹಳೆಯ ಚಿನ್ನವನ್ನು HUID ಚಿನ್ನದ ಆಭರಣಗಳಿಗೆ ಎಕ್ಸ್‌ ಚೇಂಜ್ ಮಾಡಿಕೊಳ್ಳುವ ಅವಕಾಸಾವನ್ನು ಸಂಸ್ಥೆ ಕಲ್ಪಿಸಿದೆ.
ಅದೇ ರೀತಿ ವಜ್ರಗಳ ಮೇಲೆ 20% ರಿಯಾಯಿತಿ, ಪ್ಲಾಟಿನಂ ಮೇಲೆ 7% ರೀಯಾಯಿತಿ ಲಬಿಸಲಿದೆ.
ಅತೀ ಕಡಿಮೆ ಮೇಕಿಂಗ್ ಚಾರ್ಜಸ್‌ನೊಂದಿಗೆ ಮದುವೆ ಆಭರಣಗಳನ್ನು ಇಲ್ಲಿಂದ ಖರೀದಿಸ ಬಹುದಾಗಿದೆ.

ಇನ್ನುಳಿದಂತೆ ಫ್ಲ್ಯಾಟ್ ಫಿಪ್ಟಿ ಪರ್ಸೆಂಟ್ ಡಿಸ್ಕೌಂಟ್ ಆಫರ್ ನ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಸುವ ವೇಳೆ ಗ್ರಾಹಕರಿಗೆ ಹಲವಾರು ಕೊಡುಗೆಗಳನ್ನು ನೀಡಲುದ್ದೇಶಿಸಿರುವ ಜೋಸ್ ಅಲುಕ್ಯಾಸ್‌ನಲ್ಲಿ ಹೊಚ್ಚ ಹೊಸ ವಿನ್ಯಾಸದ ಚಿನ್ನ ಹಾಗೂ ವಜ್ರದ ಆಭರಣಗಳ ಬೃಹತ್ ಸಂಗ್ರಹ ಲಭ್ಯವಿದ್ದು ಗ್ರಾಹಕರಿಗೆ ಮತ್ತಷ್ಟು ಸಹಕಾರಿಯಾಗಿದೆ.

ಕಳೆದ ಕೆಲ ವರುಷಗಳಿಂದ ಪುತ್ತೂರಿನ ಹೃದಯಭಾಗದಲ್ಲಿರುವ ಜೋಸ್ ಅಲುಕ್ಯಾಸ್ ಜ್ಯುವೆಲ್ಲರಿ ಚಿನ್ನಭರಣ ಪ್ರಿಯರಿಗೆ ಹೊಸತನದ ಖರೀದಿಗೆ ಅವಕಾಶ ಕಲ್ಪಿಸುತ್ತಿದ್ದು ಒಂದಲ್ಲ
ಒಂದು ಹಬ್ಬದ ಪ್ರಯುಕ್ತ ವಿಶೇಷ ಆಫರ್, ರಿಯಾಯಿತಿ ಮಾರಾಟಗಳ ಮೂಲಕ ವೈಶಿಷ್ಟ್ಯಮಯ ಚಿನ್ನಾಭರಣಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.ಮಾತ್ರವಲ್ಲದೆ ಗ್ರಾಹಕರ ವಿಶ್ವಾಸನೀಯ ಸಂಸ್ಥೆಗಳಲ್ಲೊಂದಾಗಿದೆ.

ಸಹಾಯಕ ಶಾಖಾ ವ್ಯವಸ್ಥಾಪಕ ಲೆನೀಶ್ ಸ್ವಾಗತಿಸಿದರು. ಅಕೌಂಟ್ಸ್ ವಿಭಾಗದ ರಾಜೇಶ್ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here