ಪೆರಿಯಡ್ಕ ಸರ್ವೋದಯ ಪ್ರೌಢಶಾಲಾ ಮಂತ್ರಿ ಮಂಡಲ ರಚನೆ

0

ನಾಯಕಿ-ಚೈತನ್ಯ, ಉಪನಾಯಕ-ಶಮೀತ್‌ ಕುಮಾರ್

ಉಪ್ಪಿನಂಗಡಿ: ಸರ್ವೋದಯ ಪ್ರೌಢಶಾಲೆ ಪೆರಿಯಡ್ಕ ಇಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ಜೂ.13ರಂದು ಚುನಾವಣೆ ನಡೆಯಿತು.
ಶಾಲಾ ನಾಯಕಿಯಾಗಿ ಚೈತನ್ಯ (10ನೇ) ಹಾಗೂ ಉಪನಾಯಕನಾಗಿ ಶಮೀತ್ ಕುಮಾರ್ (9ನೇ) ಆಯ್ಕೆಯಾದರು. ಗೃಹಮಂತ್ರಿಯಾಗಿ ಕೌಶಿಕ್(10ನೇ), ಪವನ್ (9ನೇ), ಸೋನಿತ್(8ನೇ), ಕ್ರೀಡಾಮಂತ್ರಿಯಾಗಿ ನಂದೀಶ್ (10ನೇ), ಪ್ರತೀಕ್‌ರಾಜ್ ಕೆ.(8ನೇ), ಕಲೆ ಮತ್ತು ಸಾಂಸ್ಕೃತಿಕ ಮಂತ್ರಿಯಾಗಿ ಲಿಖಿತ (10ನೇ), ಇಂಧು (9ನೇ), ನಂದನ್ (9ನೇ), ಶಿಕ್ಷಣ ಮಂತ್ರಿಯಾಗಿ ಸಿಂಚನ (10ನೇ), ಹೇಮಂತ್ ಎಂ(9ನೇ), ಜನನಿ (8ನೇ), ಆರೋಗ್ಯಮಂತ್ರಿಯಾಗಿ ನಿಶ್ಮಾ(10ನೇ), ಸುಕನ್ಯ (9ನೇ), ಮೇಘಶ್ರೀ (8ನೇ), ನೀರಾವರಿ ಮಂತ್ರಿಯಾಗಿ ಜೀವನ್(10 ನೇ), ಗಗನ್ (9 ನೇ), ಸುಶಾಂತ್ (9ನೇ), ಆಹಾರ ಉಸ್ತುವಾರಿ ಮಂತ್ರಿಯಾಗಿ ಕಾರ್ತಿಕ್ (10ನೇ), ಚರಣ್ (9ನೇ), ದಿಲೀಪ್ (9ನೇ), ತೋಟಗಾರಿಕೆ ಮಂತ್ರಿಯಾಗಿ ಯಶ್ವಿನ್ (10ನೇ), ಮೊಹಮ್ಮದ್ ಆದಿಲ್ (9ನೇ), ಸುದೀಪ್ (9ನೇ), ಕಿಶೋರಿಯರ ಸುರಕ್ಷಾ ಮಂತ್ರಿಯಾಗಿ ಸುಶ್ಮಿತ(10ನೇ), ಶಿಲ್ಪ(10ನೇ), ಖತೀಜಾ ಐಫಾ (9ನೇ), ಪ್ರತಿಭಾ ಬಿತ್ತಿಫಲಕದ ಮಂತ್ರಿಯಾಗಿ ಚಂಚಲ (9ನೇ), ದೀಕ್ಷಾ (9ನೇ), ತನ್ವಿರ (8ನೇ), ಸಭಾ ಅಧ್ಯಕ್ಷರಾಗಿ ಕಾವ್ಯಶ್ರೀ, ವಿರೋಧ ಪಕ್ಷದ ನಾಯಕನಾಗಿ ದೇವಿಪ್ರಸಾದ್(1೦ನೇ), ಇಬ್ರಾಹಿಂ ಬಾತಿಸ್ (1೦ನೇ), ವಂಶಿ ಕೆ ಗೌಡ (9ನೇ) ಅವರನ್ನು ಆಯ್ಕೆ ಮಾಡಲಾಗಿದೆ.
ಚುನಾವಣಾ ಜವಾಬ್ದಾರಿಯನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಮೋಹನ್ ಹೆಚ್ ನಿರ್ವಹಿಸಿದರು. ಚುನಾವಣಾ ಅಧಿಕಾರಿಯಾಗಿ ಶಕುಂತಲಾ ಕೆ., ಸವಿತಾ ಪಿ.ಸಿ., ರಜನಿ ಹೆಚ್.ಭವ್ಯ ವೈ, ಡೊಂಬಯ ಗೌಡ ನಿರ್ವಹಿಸಿದರು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ಪಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here