ಪುತ್ತೂರು: ಕರ್ನಾಟಕ ಈಜು ಸಂಸ್ಥೆ(ಕೆಎಸ್ಎ) ಇವರು ಆಯೋಜಿಸಿದ ಸ್ಟೇಟ್ ಸಬ್- ಜೂನಿಯರ್ & ಜೂನಿಯರ್ ಡೈವಿಂಗ್ ಚಾಂಪಿಯನ್ ಶಿಪ್ 2024-25ನಲ್ಲಿ ಬೆಂಗಳೂರಿನ kensington ಸ್ವಿಮ್ಮಿಂಗ್ ಪೂಲ್ ನಲ್ಲಿ ನಡೆದ ರಾಜ್ಯಮಟ್ಟದ ಸಬ್ ಜೂನಿಯರ್ ಡೈವಿಂಗ್ ಹೈಬೋರ್ಡ್ ಸ್ಪರ್ಧೆಯಲ್ಲಿ ಸಂತ ಫಿಲೋಮಿನ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ನಂದನ್ ನಾಯ್ಕ ಇವರು ಬೆಳ್ಳಿ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಎರಡು ಕಂಚು ಒಂದು ಬೆಳ್ಳಿ ಪದಕವನ್ನು ಪಡೆದಿರುತ್ತಾರೆ.
ಜುಲೈ 7ರಿಂದ 11ರವರೆಗೆ ಇಂದೋರ್ ನಲ್ಲಿ ನಡೆಯಲಿರುವ 50ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್ ಶಿಪ್ ಗೆ ಅರ್ಹತೆಯನ್ನು ಪಡೆದಿದ್ದು, ವಾರಣಾಸಿ ಸ್ವಿಮ್ಮಿಂಗ್ ಅಕಾಡೆಮಿ (VSA) ಅನ್ನು ಪ್ರತಿನಿಧಿಸಲಿದ್ದಾರೆ.
ಇವರಿಗೆ ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ನಿರೂಪ ಜಿ ಆರ್, ರೋಹಿತ್ ಪ್ರಕಾಶ್, ದೀಕ್ಷಿತ್ ರಾವ್, ವಿಕಾಸ್ , ಡೆಲ್ಸನ್ ಹಾಗೂ ವೆಂಕಟೇಶ್ ಇವರು ತರಬೇತಿ ನೀಡಿರುತ್ತಾರೆ. ನಂದನ್ ನಾಯ್ಕ್ ನರಿಮೊಗರು ನಿವಾಸಿ ರವಿ ಸಂಪತ್ ನಾಯ್ಕ ಹಾಗೂ ಕ್ಷಮಿತಾ ಆರ್ ನಾಯ್ಕ ದಂಪತಿಗಳ ಪುತ್ರ. ಈತನನ್ನು ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಅಭಿನಂದಿಸಿದರು. ದೈಹಿಕ ಶಿಕ್ಷಕ ನಿರ್ದೇಶಕರಾದ ಎಲೀಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.