ನಾಯಕಿ: ಸನಾ ಫಾತಿಮಾ, ಉಪನಾಯಕಿ:ಪ್ರತಿಭಾ
ಪುತ್ತೂರು: ಕೆದಂಬಾಡಿ ಗ್ರಾಮದ ತಿಂಗಳಾಡಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ 2024-25ನೇ ಸಾಲಿನ ಶಾಲಾ ಮಂತ್ರಿಮಂಡಲದ ರಚನೆಯನ್ನು ಮಾಡಲಾಯಿತು. ಶಾಲಾ ನಾಯಕಿಯಾಗಿ 8ನೇ ತರಗತಿಯ ಸನಾ ಫಾತಿಮಾ, ಉಪ ನಾಯಕಿಯಾಗಿ 7ನೇ ತರಗತಿಯ ಪ್ರತಿಭಾ ಎಸ್.ರವರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಯಿತು. ಉಳಿದಂತೆ ವಿದ್ಯಾಮಂತ್ರಿಯಾಗಿ ಆಯಿಷತ್ ನುಹ ಹಾಗೂ ಅನುಶ್ರೀ ಎಂ, ಗೃಹಮಂತ್ರಿಯಾಗಿ ರಕ್ಷಣ್ ಹಾಗೂ ಶ್ರೀಶ, ಕೃಷಿ ಮಂತ್ರಿಗಳಾಗಿ ಮಂಜುನಾಥ ಹಾಗೂ ಮಹಮ್ಮದ್ ಜುನೈದ್, ಆಹಾರ ಮಂತ್ರಿಗಳಾಗಿ ರಂಜಿತ ಹಾಗೂ ಯಶ್ವಿತಾ, ಆರೋಗ್ಯ ಮಂತ್ರಿಗಳಾಗಿ ಮುಬಶ್ಯಿರ ಎಂ ಹಾಗೂ ಫಾತಿಮತ್ ಸಯೀಹ, ಸಾಂಸ್ಕೃತಿಕ ಮಂತ್ರಿಗಳಾಗಿ ಫಾತಿಮತ್ ಇರ್ಷಾನ ಹಾಗೂ ಶ್ರಾವ್ಯ, ನೀರಾವರಿ ಮಂತ್ರಿಗಳಾಗಿ ಧನ್ವಿತ್ ಹಾಗೂ ಸನ್ವಿತ್, ಸ್ವಚ್ಚತಾ ಮಂತ್ರಿಗಳಾಗಿ ಫೌಝಾನ್ ಹಾಗೂ ರೇಷ್ಮಾ ಆರ್, ಕ್ರೀಡಾ ಮಂತ್ರಿಗಳಾಗಿ ಮುನವ್ವರ್ ಅಲಿ,ಗ್ರಂಥಾಲಯ ನಿರ್ವಹಣಾ ಮಂತ್ರಿಗಳಾಗಿ ಫಾತಿಮತ್ ಶಮ್ನಾ ಹಾಗೂ ಫಾಝಿಲ ಬಾನು, ವಿರೋಧ ಪಕ್ಷದ ನಾಯಕಿಯಾಗಿ ರಾಯಿದ್ ಅಬ್ದುಲ್ ಖಾದರ್, ಸಭಾಪತಿಯಾಗಿ ಟಿ.ವಿ ಮುಹಮ್ಮದ್ ಸಾಲಿಂರವರು ಆಯ್ಕೆಯಾದರು ಎಂದು ಶಾಲಾ ಮುಖ್ಯಗುರು ವಿಜಯ ಕೆ.ರವರು ತಿಳಿಸಿದ್ದಾರೆ.