ಜಲಸಿರಿ ಪೈಪ್ ಅಳವಡಿಸಿದಲ್ಲೆಲ್ಲಾ ಹೊಂಡ..!ಹಾರಾಡಿ-ಬನ್ನೂರು ರಸ್ತೆಯಲ್ಲಿ ನಿತ್ಯ ವಾಹನ ಅಪಘಾತ

0

ಪುತ್ತೂರು: ಕೆಯುಐಡಿಎಫ್ ಸಿಯ ಮೂಲಕ ನಡೆಯುತ್ತಿರುವ ಜಲಸಿರಿ 24/7 ಸಮಗ್ರ ಕುಡಿಯುವ ನೀರಿನ ಸರಬರಾಜು ಯೋಜನೆಗೆ ಸಂಬಂಧಿಸಿ ನಗರಸಭೆ ವ್ಯಾಪ್ತಿಯಲ್ಲಿ ಪೈಪ್ ಅಳವಡಿಕೆ ವೇಳೆ ಡಾಮರು ಕಿತ್ತು ಹೋಗಿ ಹೊಂಡಗಳು ನಿರ್ಮಾಣಗೊಂಡಿದ್ದು, ಇದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಬನ್ನೂರಿನಲ್ಲಿ ಮೆಸ್ಕಾಂ, ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿ ಇದ್ದು ವಾಹನಗಳ ಒತ್ತಡದಿಂದ ಹಾರಾಡಿ-ಬನ್ನೂರು ರಸ್ತೆಯಲ್ಲಿ ನಿತ್ಯ ವಾಹನ ಅಪಘಾತಗಳು ನಡೆಯುತ್ತಿವೆ.


ಜಲಸಿರಿ ಕಾಮಗಾರಿ ವೇಳೆ ನಿರ್ಮಾಣವಾದ ಹೊಂಡಕ್ಕೆ ತಾತ್ಕಾಲಿಕ ಡಾಮರು ತೇಪೆ ಹಾಕಿದರೂ ಅದು ಕಳಪೆಯಾಗಿದ್ದರಿಂದ ಎಲ್ಲಾ ಕಡೆ ಕಿತ್ತುಹೋಗಿದೆ. ಹಾರಾಡಿಯಿಂದ ಬನ್ನೂರು ಕರ್ಮಲದ ತನಕ ಸುಮಾರು 15 ಕಡೆ ರಸ್ತೆಯನ್ನು ಅಗೆದು ಪೈಪ್ ಅಳವಡಿಸಲಾಗಿದ್ದ ಸ್ಥಳದಲ್ಲಿ ಹೊಂಡ ನಿರ್ಮಾಣವಾಗಿದೆ. ವಾಹನ ಸವಾರರು ಹೊಂಡ ತಪ್ಪಿಸುವ ಸಂದರ್ಭ ಬಹುತೇಕ ಅಪಘಾತಗಳು ನಡೆದಿವೆ. ನಿತ್ಯ ವಾಹನಗಳ ಒತ್ತಡ ಇರುವ ಈ ರಸ್ತೆಯನ್ನು ಆದಷ್ಟು ಬೇಗ ಸುರಕ್ಷಿತ ರಸ್ತೆಯನ್ನಾಗಿ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here