ಪುತ್ತೂರು: ದಿ.ಪ್ರಕಾಶ್ ಪುರುಷರಕಟ್ಟೆ ಹಾಗೂ ಮರ್ಹೂಂ ಹಮೀದ್ ಕೋಡಿ ಶಾಂತಿಗೋಡು ಇವರ ಸ್ಮರಣಾರ್ಥ ಟೈ ಬ್ರೇಕರ್ಸ್ ಪುರುಷರಕಟ್ಟೆ ಹಾಗೂ ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ಇದರ ಜಂಟಿ ಸಾರಥ್ಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಸಹಯೋಗದಲ್ಲಿ ರೋಟರಿ ಕ್ಯಾಂಪ್ಕೊ ಪುತ್ತೂರು ಬ್ಲಡ್ ಸೆಂಟರ್ ಸಹಕಾರದೊಂದಿಗೆ ಮಾದರಿ ರಕ್ತದಾನ ಶಿಬಿರವು ಪುರುಷರಕಟ್ಟೆ ಜಂಕ್ಷನ್ ನಲ್ಲಿ ನಡೆಯಿತು.
60 ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಜೀವದಾನಿಗಳಾದರು.ಕಾರ್ಯಕ್ರಮದಲ್ಲಿ ಪ್ರಕಾಶ್ ಅವರ ಸಹೋದರ ಸತೀಶ್, ಸ್ಥಳೀಯ ನಾಯಕರಾದ ಮಹಾಲಿಂಗ ನಾಯ್ಕ್, ಯಂಗ್ ಬ್ರಿಗೇಡ್ ರಾಜ್ಯಾಧ್ಯಕ್ಷರಾದ ಜುನೈದ್ ಪಿ ಕೆ,ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ಇದರ ಅಧ್ಯಕ್ಷರಾದ ಸಿದ್ದೀಕ್ ಗಡಿಪ್ಪಿಲ, ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉಮೇಶ್ ಇಂದಿರಾನಗರ, ನರಿಮೊಗರು ಗ್ರಾಮ ಪಂಚಾಯತ್ ಸದಸ್ಯರಾದ ಹೊನ್ನಪ್ಪ ಪೂಜಾರಿ ಕೈಂದಾಡಿ, ಎಸ್ ಡಿ ಪಿ ಐ ನರಿಮೊಗರು ವಲಯ ಅಧ್ಯಕ್ಷರಾದ ಸಲೀಂ ಮಾಯಾಂಗಳ, ವೇದನಾಥ್ ಸುವರ್ಣ, ರವೀಂದ್ರ ರೈ ನೆಕ್ಕಿಲು, ನರಿಮೊಗರು ಸಿಎ ಬ್ಯಾಂಕ್ ನಿರ್ದೇಶಕ ಬಾಬು ಶೆಟ್ಟಿ, ಪರಮೇಶ್ವರ ಭಂಡಾರಿ, ಬೇಬಿ ಜೋನ್, ಶರತ್ ಭಟ್ ಬೈಪಾಡಿತ್ತಾಯ, ಅಲ್ ರಬೀಹ್ ಪ್ರಧಾನ ಕಾರ್ಯದರ್ಶಿ ನಾಸಿರ್ ಪರ್ಪುಂಜ ,ಅಲ್ ರಬೀಹ್ ಕೋಶಾಧಿಕಾರಿ ರಿಯಾಝ್ ಶಾಂತಿಗೋಡು, ಸ್ಥಾಪಕರಾದ ಆಸೀಫ್ ಪಾಪೆತ್ತಡ್ಕ, ಅಲ್ ರಬೀಹ್ ಸದಸ್ಯರಾದ ಉಸ್ಮಾನ್ ಎ ಕೆ ಪೇರಮುಗೇರು, ಸಲೀಂ ಪಾಪು ಪುರುಷರಕಟ್ಟೆ, ಟೈ ಬ್ರೇಕರ್ಸ್ ನ ಶಿಹಾಬ್, ಜಮಾಲ್, ಇಲ್ಯಾಸ್, ಮುಹಾಝ್ ಭಾಗವಹಿಸಿ ಸಹಕರಿಸಿದರು.30ನೇ ಬಾರಿ ರಕ್ತದಾನ ಮಾಡಿದ ಝುಬೈರ್ ಪಿ ಕೆ ಇಂದಿರಾನಗರ ಇವರನ್ನು ಪುತ್ತೂರು ರೋಟರಿ ಬ್ಲಡ್ ಬ್ಯಾಂಕ್ ನ ಡಾ.ಸೀತಾರಾಮ್ ಭಟ್ ಇವರು ಗೌರವಿಸಿದರು. ಬ್ಲಡ್ ಡೋನರ್ಸ್ ಮಂಗಳೂರು ಇದರ ಗಲ್ಫ್ ಕಾರ್ಯದರ್ಶಿಯಾಗಿರುವ ರಜಾಕ್ ಸಾಲ್ಮರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.