ಜೂ.27: ಸವಣೂರಿನಲ್ಲಿ ಗ್ರಾ.ಪಂ.,ಸಂಜೀವಿನಿ ಒಕ್ಕೂಟ,ಸ್ತ್ರೀ ಶಕ್ತಿ ಸಂಘದ ಸಹಯೋಗದಲ್ಲಿ ಬಟ್ಟೆ ಚೀಲ ತಯಾರಿಕಾ ಘಟಕ ಉದ್ಘಾಟನೆ

0

ಸವಣೂರು: ಸವಣೂರು ಗ್ರಾಮ ಪಂಚಾಯತ್ ,ಶ್ರೀ ರಾಮ ಸಂಜೀವಿನಿ ಗ್ರಾಮ‌ ಪಂಚಾಯತ್ ಮಟ್ಟದ ಒಕ್ಕೂಟ ,ಸ್ತ್ರೀ ಶಕ್ತಿ ಸಂಘ ಸವಣೂರು ಇದರ ಸಹಯೋಗದಲ್ಲಿ ಬಟ್ಟೆ ಚೀಲ ತಯಾರಿಕಾ ಘಟಕದ ಉದ್ಘಾಟನಾ ಕಾರ್ಯಕ್ರಮ ಜೂ.27ರಂದು ಗ್ರಾಮ ಪಂಚಾಯತ್‌ನ ಕುಮಾರಧಾರ ಸಭಾಂಗಣದಲ್ಲಿ ನಡೆಯಲಿದೆ.

ಪ್ಲಾಸ್ಟಿಕ್ ಚೀಲ ಬಿಡಿ ಬಟ್ಟೆ ಚೀಲ ಹಿಡಿ ಅಭಿಯಾನದ ಅಂಗವಾಗಿ ಸಾರ್ವಜನಿಕರು ಬಟ್ಟೆ ಚೀಲ ಪಡೆದುಕೊಂಡು ,ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕೆಂದು ಗ್ರಾ.ಪಂ.ಸಾರ್ವಜನಿಕರಲ್ಲಿ ವಿನಂತಿಸಿದೆ.

LEAVE A REPLY

Please enter your comment!
Please enter your name here