ತಾ|ದೈಹಿಕ ಶಿಕ್ಷಣ ಶಿಕ್ಷಕರ ಸಂಘ – ಅಧ್ಯಕ್ಷ: ಚಕ್ರಪಾಣಿ, ಕಾರ್ಯದರ್ಶಿ:ಸ್ಟ್ಯಾನಿ ಮಸ್ಕರೇನ್ಹಸ್, ಕೋಶಾಧಿಕಾರಿ:ವನಿತಾ

0

ಪುತ್ತೂರು: ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಪುತ್ತೂರು ತಾಲೂಕು ಸಮಿತಿಯ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರಗಿದ್ದು, ಅಧ್ಯಕ್ಷರಾಗಿ ಬಜತ್ತೂರು ಪ್ರೌಢಶಾಲೆಯ ಚಕ್ರಪಾಣಿ, ಪ್ರಧಾನ ಕಾರ್ಯದರ್ಶಿಯಾಗಿ ಕುಡಿಪಾಡಿ ಸರಕಾತಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್, ಕೋಶಾಧಿಕಾರಿಯಾಗಿ ಮುಂಡೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವನಿತಾ, ಗೌರವಾಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ಸೀತಾರಾಮ ಗೌಡ ಎಂ.ರವರು ಆಯ್ಕೆಯಾಗಿದ್ದಾರೆ. ಜಿಲ್ಲಾ ಅಧ್ಯಕ್ಷೆ ಲಿಲ್ಲಿ ಪಾಯಿಸ್ ರವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನೆರವೇರಿತು.


ಉಳಿದಂತೆ ಉಪಾಧ್ಯಕ್ಷರುಗಳಾಗಿ ಸಂತ ಫಿಲೋಮಿನಾ ಪ್ರೌಢಶಾಲೆಯ ನರೇಶ್ ಲೋಬೊ ಹಾಗೂ ಪಾಪೆಮಜಲು ಪ್ರೌಢಶಾಲೆಯ ಪ್ರವೀಣ ರೈ, ಜೊತೆ ಕಾರ್ಯದರ್ಶಿಗಳಾಗಿ ದರ್ಬೆ ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ನಿರಂಜನ್ ಹಾಗೂ ಪೆರ್ನಾಜೆ ಸೀತಾರಾಘವ ಪ್ರೌಢಶಾಲೆಯ ಬಾಲಕೃಷ್ಣ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಾಂತಿನಗರ ಪ್ರೌಢಶಾಲೆಯ ನಿರ್ಮಲ ರೊಡ್ರಿಗಸ್, ಕಬಕ ಪ್ರೌಢಶಾಲೆಯ ಕೃಷ್ಣಯ್ಯ, ಕೋಡಿಂಬಾಡಿ ಸರಕಾರಿ ಪ್ರಾಥಮಿಕ ಶಾಲೆಯ ವಿಜಯಪ್ರಭು, ಪೆರ್ಲಂಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಾಜೀವಿ, ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಗೀತಾಂಜಲಿ, ಬಲ್ನಾಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸದಾಶಿವ, ಉಪ್ಪಿನಂಗಡಿ ಸೈಂಟ್ ಮೇರೀಸ್ ಶಾಲೆಯ ಸತೀಶ್, ಪುತ್ತೂರು ಶಿವರಾಮ ಕಾರಂತ ಪ್ರೌಢಶಾಲೆಯ ಪ್ರಮೀಳರವರು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here