ಲಾವತಡ್ಕ: ಗಾಳಿ ಮಳೆಗೆ ಶೆಡ್‌ಗೆ ಹಾನಿ

0

ನೆಲ್ಯಾಡಿ: ಜೂ.26ರಂದು ರಾತ್ರಿ ಸುರಿದ ಭಾರೀ ಮಳೆ ಹಾಗೂ ಗಾಳಿಗೆ ಇಚ್ಲಂಪಾಡಿ ಗ್ರಾಮದ ಲಾವತಡ್ಕ ಎಂಬಲ್ಲಿ ತೋಟದ ಶೆಡ್‌ನ ಶೀಟ್ ಹಾರಿ ಹೋಗಿ ಗೋಡೆ ಕುಸಿದು ಬಿದ್ದ ಘಟನೆ ನಡೆದಿದೆ.
ಲಾವತ್ತಡ್ಕ ನಿವಾಸಿ ಜೋಸೆಫ್ ಎಂಬವರಿಗೆ ಸೇರಿದ ಶೆಡ್‌ನ ಶೀಟ್ ಹಾರಿ ಹೋಗಿ ಒಂದು ಮಳೆಗೆ ಒಂದು ಬದಿಯ ಗೋಡೆ ಕುಸಿದು ಬಿದ್ದಿದೆ. ಇದರಿಂದಾಗಿ ಜೋಸೆಫ್ ಅವರಿಗೆ ಸಾವಿರಾರೂ ರೂ.ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here