ಗೋಳಿತ್ತೊಟ್ಟು: ಬರೆ ಕುಸಿತ-ಮನೆಗೆ ಹಾನಿ

0

ನೆಲ್ಯಾಡಿ: ಭಾರೀ ಮಳೆಗೆ ಬರೆ ಜರಿದು ಮಣ್ಣು ಮನೆಯ ಗೋಡೆಗೆ ಬಿದ್ದ ಪರಿಣಾಮ ಗೋಡೆ ಬಿರುಕು ಬಿಟ್ಟು ಹಾನಿಯಾದ ಘಟನೆ ಗೋಳಿತ್ತೊಟ್ಟು ಗ್ರಾಮದ ಕಲ್ಲಡ್ಕದಲ್ಲಿ ಜೂ.೨೬ರಂದು ರಾತ್ರಿ ನಡೆದಿದೆ.

ಕಲ್ಲಡ್ಕ ನಿವಾಸಿ ಸೇಸಪ್ಪ ಗೌಡರವರ ಮನೆ ಸಮೀಪದ ಬರೆ ಭಾರೀ ಮಳೆಗೆ ಕುಸಿದಿದೆ. ಇದರ ಮಣ್ಣು ಮನೆಯ ಗೋಡೆಗೆ ಬಿದ್ದಿದೆ. ಇದರಿಂದಾಗಿ ಗೋಡೆ ಬಿರುಕು ಬಿಟ್ಟಿದೆ. ಸೇಸಪ್ಪ ಗೌಡ ಹಾಗೂ ಅವರ ಮನೆಯವರು ಅಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here