ಇನ್‌ಸ್ಪೈರ್ ಅವಾರ್ಡ್: ಹಿರೆಬಂಡಾಡಿಯ ವಚನ್ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಹಿರೆಬಂಡಾಡಿ: ಡಿಪಾರ್ಟ್‌ಮೆಂಟ್ ಸೈನ್ಸ್ ಆಂಡ್ ಟೆಕ್ನಾಲಜಿ ಮತ್ತು ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ಆಫ್ ಇಂಡಿಯಾ ಇದರ ವತಿಯಿಂದ ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡ್ ಮಾನಕ್‌ಗೆ ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ, ಪೆರ್ನೆ ಶ್ರೀ ರಾಮಚಂದ್ರ ಪಿ.ಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ವಚನ್ ಎಂ. ಅವರ ವಿಜ್ಞಾನ ಮಾದರಿಯು ಆಯ್ಕೆಯಾಗಿದೆ.

ಇವರು ಭತ್ತ, ಗೋಧಿ, ಅಡಿಕೆ, ಕಾಳುಮೆಣಸು, ದ್ವಿದಳ ಧಾನ್ಯಗಳನ್ನು ಬೇರ್ಪಡಿಸುವ ಸರಳ ಯಂತ್ರವನ್ನು ತಯಾರಿಸಿದ್ದು, ಆನ್‌ಲೈನ್‌ನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜುಲೈ ತಿಂಗಳಲ್ಲಿ ಎನ್.ಐ.ಟಿ.ಕೆ ಸುರತ್ಕಲ್ ಇಲ್ಲಿ ವಿಶೇಷ ತರಬೇತಿಯನ್ನು ಆಯೋಜಿಸಲಾಗಿದೆ.
ವಚನ್ ಹಿರೆಬಂಡಾಡಿ ಗ್ರಾಮದ ಮುಗಳಿ ಮನೆ ಕೇಶವ ಮತ್ತು ಜಯಂತಿ ಇವರ ಪುತ್ರ. ಈತನಿಗೆ ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ಮನೋಹರ ಮರಂಕಾಡಿಯವರು ಮಾರ್ಗದರ್ಶನ ನೀಡಿರುತ್ತಾರೆ. ಶಾಲಾ ಮುಖ್ಯಗುರು ಶ್ರೀಧರ ಭಟ್ ಕೆ, ಮತ್ತು ಶಿಕ್ಷಕರು ಹಾಗೂ ಎಸ್‌ಡಿಎಂಸಿಯವರು ಸಹಕಾರ ನೀಡಿದ್ದರು.

LEAVE A REPLY

Please enter your comment!
Please enter your name here