ಪೆರ್ನೆ ಆವರಣಗೋಡೆ ಕುಸಿತ- ರಸ್ತೆಗೆ ಮಣ್ಣು – ಅಪಾಯದಿಂದ ಪಾರಾದ ಶಾಲಾ ವಾಹನ

0

ಉಪ್ಪಿನಂಗಡಿ : ಖಾಸಗಿ ವ್ಯಕ್ತಿಯೋರ್ವರ ಜಮೀನಿನ ಆವರಣ ಗೋಡೆ ಶಾಲಾ ವಿದ್ಯಾರ್ಥಿಗಳ ವಾಹನ ಅಪಾಯದಿಂದ ಪಾರಾದ ಘಟನೆ ಪೆರ್ನೆ ಗ್ರಾಮದ ಬಿಳಿಯೂರಿನಲ್ಲಿ ನಡೆದಿದೆ.
ಗುರುವಾರ ಮುಂಜಾನೆ ಬಿಳಿಯೂರು ಬಳಿ ವ್ಯಕ್ತಿಯೋರ್ವರು ಜಮೀನಿಗೆ ರಸ್ತೆ ಮಾರ್ಜಿನಿನ ಸನಿಹದಲ್ಲೆ ಆವರಣ ಗೋಡೆ ಕಟ್ಟಿದ್ದು ಬಾರಿ ಮಳೆಯಿಂದ ರಸ್ತೆಗೆ ದಿಡೀರ್ ಉರುಳಿ ಬಿತ್ತು. ಇದೇ ಪುತ್ತೂರು ಖಾಸಗಿ ವಿದ್ಯಾ ಸಂಸ್ಥೆಯ ಟೆಂಪೋ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿಸಿಕೊಳ್ಳಲು ಹೋಗಿ ಶಾಲಾ ವಾಹನ ಚರಂಡಿಗೆ ವಾಲಿತು ಸುಮಾರು ಮೂರು ಗಂಟೆಗಳ ಕಾಲ ಸಂಚಾರದಲ್ಲಿ ತೊಡಕು ಉಂಟಾಗಿದ್ದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ , ಕಾರ‍್ಯದರ್ಶಿ ರಾಜೇಶ, ಸದಸ್ಯರಾದ ಕೇಶವ ಸುಣ್ಣಾಣ, ತನಿಯಪ್ಪ ಸಹಿತ ಗ್ರಾಮಸ್ಥರ ಸಹಕಾರದಿಂದ ರಸ್ತೆ ಸಂಚಾರ ಸುಗಮಗೊಳಿಸಲು ಹರಸಾಹಸ ಪಟ್ಟು ಸಂಜೆ ವೇಳೆಗೆ ಸುಗಮಗೊಂಡಿತು. ಸ್ಥಳಕ್ಕೆ ಗ್ರಾಮ ಕರಣಿಕರಾದ ಚಂದ್ರಕಲಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here