ಪುತ್ತೂರು: ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ರ‍್ಯಾಗಿಂಗ್ ವಿರೋಧಿ ಜಾಗೃತಿ ಕಾರ್ಯಕ್ರಮ 26/06/2024 ರಂದು ನಡೆಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾದ್ಯಾಪಕಿ ಸಂಗೀತ ಎಸ್ ಎಂ ಮಾತನಾಡಿ, ರ‍್ಯಾಗಿಂಗ್ ಎಂಬುದು ಯುರೋಪಿನಿಂದ ಭಾರತಕ್ಕೆ ಬಂದಿದ್ದು, ಇದು ಭಾರತದಲ್ಲಿ ಹುಟ್ಟಿದ್ದಲ್ಲ. 2001ರಲ್ಲಿ ಜಾದವಪುರ ಕಾಲೇಜಿನಲ್ಲಿ ನಡೆದ ರ‍್ಯಾಗಿಂಗ್ ನಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೈದಿದ್ದು, ಈ ಕೇಸ್ ನ ಅಡಿಯಲ್ಲಿ ಸುಪ್ರೀಂ ಕೋರ್ಟ್ ಯುಜಿಸಿ ಎಂಬ ಕಾಯಿದೆಯಲ್ಲಿ ಹೇಗೆ ರ‍್ಯಾಗಿಂಗ್ ಅನ್ನು ನಿಯಂತ್ರಣಕ್ಕೆ ತರಬಹುದು ಎಂಬ ನಿಯಮವನ್ನು ಹೊರತಂದಿತು. ವಿದ್ಯಾರ್ಥಿಗಳು ಎದೆಗುಂದದೆ ಮಾನಸಿಕವಾಗಿ ಗಟ್ಟಿಯಾಗಿದ್ದರೆ ಯಾವುದೇ ರ‍್ಯಾಗಿಂಗ್ ಗೂ ಹೆದರುವ ಅವಶ್ಯಕತೆ ಇಲ್ಲ ಎಂದರು.
ಪ್ರಾಂಶುಪಾಲರಾದ ಡಾ| ಶೋಭಿತಾ ಸತೀಶ್ ಪ್ರಾಸ್ತಾವಿಕ ಮಾತುಗಳಾನ್ನಾಡಿದರು. ಸಹಾಯಕ ಪ್ರಾಧ್ಯಾಪಕಿ ರಾಜೀವಿ ಬಿ. ಕಾರ್ಯಕ್ರಮವನ್ನು ಸಂಯೋಜಿಸಿದರು. ಈ ಸಂದರ್ಭದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಪ್ರಥಮ ಪ್ರಶಿಕ್ಷಣಾರ್ಥಿ ಪಲ್ಲವಿ ಸ್ವಾಗತಿಸಿ, ಪಿ.ಅಂಕಿತ ಧನ್ಯವಾದ ಸಲ್ಲಿಸಿದರು. ಚೈತನ್ಯ ನಿರೂಪಿಸಿದರು.