ಹೋಟೆಲ್ ನ್ಯೂ ಗಣೇಶ್ ಪ್ರಸಾದ್‌ ಮಾಲಕರಿಂದ ಗ್ರಾಹಕರಿಗೆ ಕೃತಜ್ಞತೆ ಸಮರ್ಪಣೆ

0

ಪುತ್ತೂರು: ಪುತ್ತೂರು ಮುಖ್ಯರಸ್ತೆ ಬೋನಂತಾಯ ಆಸ್ಪತ್ರೆ ಕಟ್ಟಡ ಮತ್ತು ಸೇತುವೆಯ ನಡುವೆ ಇರುವ ಸುಮಾರು 40 ವರ್ಷ ಇತಿಹಾಸ ಇರುವ ಹೋಟೆಲ್ ನ್ಯೂ ಗಣೇಶ್‌ಪ್ರಸಾದ್ ಜೂ.28ರ ಬಳಿಕ ಖಾಯಂ ಸ್ಥಗಿತಗೊಳ್ಳಲಿರುವ ಹಿನ್ನೆಲೆಯಲ್ಲಿ ಹೊಟೇಲ್ ಮಾಲಕರು ಮತ್ತು ಕುಟುಂಬಸ್ಥರು ಬಂದ ಗ್ರಾಹಕರಿಗೆ ಕೃತಜ್ಞತೆ ಸಮರ್ಪಿಸಿದರು. ಗ್ರಾಹಕರು ಹೋಟೆಲ್‌ನಿಂದ ಕೊನೆಯ ಆತಿಥ್ಯವನ್ನು ಸವಿದರು.


ಗೋಪಾಲಕೃಷ್ಣ ಹೇರಳೆಯವರು ಪತ್ರಿಕೆಯೊಂದಿಗೆ ಮಾತನಾಡಿ ನಮ್ಮ ತಂದೆಯವರಾದ ದಿ. ವಿದ್ವಾನ್ ನರಸಿಂಹ ಹೇರಳೆ ಅವರ ನೇತೃತ್ವದಲ್ಲಿ ಇಲ್ಲಿ ಹೋಟೆಲ್ ಆರಂಭವಾಯಿತು. ತಂದೆಯವರ ಜೊತೆಯಲ್ಲಿ ಅವರ ಅಶೀರ್ವಾದಿಂದ ನಾವು ಹೋಟೆಲ್ ಮುಂದುವರಿಸಿದೆವು. ತದ ನಂತರ ತಂದೆಯವರ ಪ್ರಾಮಾಣಿಕತೆಯ ವ್ಯಾಪಾರವನ್ನು ನನ್ನ ತಮ್ಮ, ಇವತ್ತು ನನ್ನ ಅಕ್ಕನ ಮಗ ಹಾಗೆ ಇಡಿ ನಮ್ಮ ಕುಟುಂಬ ಇದಕ್ಕೆ ಬೆನ್ನೆಲುಬಾಗಿ ನಿಂತು ಗಣೇಶ್ ಪ್ರಸಾದ್ ಎಂಬ ಸಂಸ್ಥೆ ಪುತ್ತೂರಿನಲ್ಲಿ ಒಂದು ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಎಲ್ಲಾ ಗ್ರಾಹಕರ ಸಂಪೂರ್ಣ ಅಶೀರ್ವಾದ ಪ್ರೀತಿಯಿಂದ ಮುನ್ನಡೆಸುತ್ತೇವೆ ಎಂಬ ವಿಶ್ವಾಸ ಇದೆ ಎಂದರು. ಇದೇ ಸಂದರ್ಭ ಗ್ರಾಹಕರು ಉಪಹಾರ, ಮಧ್ಯಾಹ್ನದ ಊಟ ಸವಿದು ಹೊಟೇಲ್‌ನ ಉತ್ತಮ ಸೇವೆಗೆ ಧನ್ಯಾತಾ ಮನೋಭಾವ ತೋರಿಸಿದರು.

ಮುರದಲ್ಲಿ ಪ್ರಾರಂಭ
ಮಹಾಲಿಂಗೇಶ್ವರನ ಸಂಪೂರ್ಣ ಅನುಗ್ರಹದಿಂದ ಪುತ್ತೂರಿನ ಮಣ್ಣಿನಲ್ಲಿ ಸಾರ್ಥಕತೆಯನ್ನು ಮಾಡಿದ್ದೇವೆ. ಅದೇ ರೀತಿ ಅಪ್‌ಗ್ರೇಡ್ ಮಾಡಬೇಕೆಂಬ ವ್ಯವಸ್ಥೆಯಲ್ಲಿ ಜಿ.ಎಲ್.ಕಾಂಪ್ಲೆಕ್ಸ್ ನಲ್ಲಿ ಪ್ರಾರಂಭಿಸಿದ್ದೆವು. ಜಿ.ಎಲ್ ಕಾಂಪ್ಲೆಕ್ಸ್‌ನಲ್ಲಿ ಶಾಶ್ವತವಾಗಿ ಮುಂದುವರಿಯಲಿದೆ. ಮುಂದೆ ನನ್ನ ಅಳಿಯ ಮುರದಲ್ಲಿ ಪ್ರಾರಂಭ ಮಾಡಬೇಕೆಂದು ಆಶಯವನ್ನು ಇಟ್ಟುಕೊಂಡಿದ್ದಾರೆ. ನಮ್ಮ ಮಕ್ಕಳು ಇದನ್ನು ಮುಂದುವರಿಸಲಿದ್ದಾರೆಂಬ ಭರವಸೆ ಇದೆ.
ಗೋಪಾಲಕೃಷ್ಣ ಹೇರಳೆ

LEAVE A REPLY

Please enter your comment!
Please enter your name here