ಕಾವು: ನನ್ಯ ತುಡರ್ ಯುವಕ ಮಂಡಲಕ್ಕೆ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ: ಪುರುಷೋತ್ತಮ ಆಚಾರ್ಯ ನನ್ಯ, ಪ್ರ.ಕಾರ್ಯದರ್ಶಿ: ಶ್ರೀಕುಮಾರ್ ಬಲ್ಯಾಯ


ಕಾವು: ಭಾರತ ಸರಕಾರದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಪುರುಷೋತ್ತಮ ಆಚಾರ್ಯ ನನ್ಯ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಕುಮಾರ್ ಬಲ್ಯಾಯರವರು ಆಯ್ಕೆಯಾಗಿದ್ದಾರೆ.


ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯರವರ ಅಧ್ಯಕ್ಷತೆಯಲ್ಲಿ ತುಡರ್ ಸದನದಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಉಳಿದಂತೆ ಉಪಾಧ್ಯಕ್ಷರಾಗಿ ಯತೀಶ್ ರೈ ಮದ್ಲ, ಜತೆ ಕಾರ್ಯದರ್ಶಿಯಾಗಿ ಹರ್ಷಿತ್ ಆಚಾರಿಮೂಲೆಯವರನ್ನು ಆಯ್ಕೆ ಮಾಡಲಾಯಿತು. ಮಹಾಸಭೆಯಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷ ಶೇಷಪ್ಪ ಗೌಡ ಪರನೀರು, ಅಧ್ಯಕ್ಷ ಜಗದೀಶ ನಾಯ್ಕ ಆಚಾರಿಮೂಲೆ, ಮಾಜಿ ಅಧ್ಯಕ್ಷ ಸುನೀಲ್ ನಿಧಿಮುಂಡ, ಭಜನಾ ಸಂಘದ ಗೌರವಾಧ್ಯಕ್ಷ ರಾಮಣ್ಣ ನಾಯ್ಕ ಆಚಾರಿಮೂಲೆ, ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆ, ಕಾರ್ಯದರ್ಶಿ ಲಿಂಗಪ್ಪ ನಾಯ್ಕ ನನ್ಯ, ಸದಸ್ಯರಾದ ನಿರಂಜನ ಕಮಲಡ್ಕ, ಬಾಲಕೃಷ್ಣ ಪಾಟಾಳಿ ನನ್ಯ, ರಾಜೇಶ್ ಬಿ, ರಮೇಶ್ ಗೌಡ ಆಚಾರಿಮೂಲೆ, ಭವಿತ್ ರೈ ಮದ್ಲ, ದಿಶಾಂತ್ ಮದ್ಲ, ಅಜಿತ್ ಕೆರೆಮೂಲೆ, ಶಿವಪ್ರಸಾದ್ ಕೌಡಿಚ್ಚಾರ್, ತಿರುಮಲೇಶ ಮಿನೋಜಿಕಲ್ಲು, ಜಗನ್ನಾಥ ಗೌಡ ಪರನೀರು, ರಾಘವ ಪಿ.ಎಸ್, ಅಜಿತ್ ಕುಲಾಲ್ ಮದ್ಲ, ಪ್ರಭಾತ್ ಪರನೀರುರವರು ಪಾಲ್ಗೊಂಡಿದ್ದರು

LEAVE A REPLY

Please enter your comment!
Please enter your name here