ಮುಂಡೂರು: ಮನೆ ಕುಸಿತ: ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನದ ಮಂಜೂರಾತಿ ಪತ್ರ ವಿತರಣೆ

0

ಪುತ್ತೂರು: ಮುಂಡೂರು ಗ್ರಾಮದ ಕಲ್ಲಗುಡ್ಡೆ ವಿಠಲ ಆಚಾರ್ಯ ಎಂಬವರ ಮನೆಯು ಕಳೆದ ಒಂದು ತಿಂಗಳ ಹಿಂದೆ ಮಳೆಗೆ ಹಾನಿಗೊಳಗಾಗಿದ್ದು ಇವರ ಪತ್ನಿ ಸರಸ್ವತಿಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸರಸ್ವತಿ ಸಂಘದ ಸದಸ್ಯರಾಗಿದ್ದಾರೆ. ಮನೆ ಕುಸಿತದಿಂದ ಮನೆ ದುರಸ್ತಿಗೆ ಸಹಾಯಧನ ನೀಡುವಂತೆ ಅವರು ಸಂಘದ ಮೂಲಕ ಮನವಿ ಮಾಡಿಕೊಂಡಿದ್ದರು. ಅವರ ಮನವಿಗೆ ಸ್ಪಂಧಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.25 ಸಾವಿರ ಸಹಾಯಧನ ಬಿಡುಗಡೆಯಾಗಿದ್ದು ಇದರ ಮಂಜೂರಾತಿ ಪತ್ರವನ್ನು ಜೂ.28 ರಂದು ಸರಸ್ವತಿಯವರಿಗೆ ನೀಡಲಾಯಿತು.


ಈ ಸಂದರ್ಭದಲ್ಲಿ ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈ, ಮುಂಡೂರು ಗ್ರಾಪಂ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷೆ ಯಶೋಧಾ, ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ, ಗ್ರಾಮಾಭಿವೃದ್ದಿ ಯೋಜನೆಯ ವಲಯಾಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಕುರಿಯ ಒಕ್ಕೂಟದ ಅಧ್ಯಕ್ಷ ಪ್ರೇಮಾ, ಕುಂಬ್ರ ವಲಯ ಮೇಲ್ವಿಚಾರಕಿ ಜಯಂತಿ ಕೆ, ಕುರಿಯ ಸೇವಾ ಪ್ರತಿನಿಧಿ ಜಯಂತಿ ಡಿ, ಮುಂಡೂರು ಸೇವಾ ಪ್ರತಿನಿಧಿ ಗೀತಾ ಹಾಗೂ ಸಂಘದ ಸದಸ್ಯರಾದ ಕಮಲ, ಭವಾನಿ, ಲೀಲಾವತಿ, ಭವಾನಿ, ಗುಲಾಬಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here