ಪುತ್ತೂರು ಧರೆ ಕುಸಿದ ಸ್ಥಳಗಳಿಗೆ ಜಿಲ್ಲಾಧಿಕಾರಿ ಭೇಟಿ

0

ಪುತ್ತೂರು:ಕಳೆದ ಎರಡು ಮೂರು ದಿನಗಳ ಮಳೆಯಿಂದ ಅಲ್ಲಲ್ಲಿ ಧರೆ ಕುಸಿತ ಸೇರಿದಂತೆ ಪ್ರಾಕೃತಿಕ ವಿಕೋಪಗಳು ಸಂಭವಿಸಿದ್ದು ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಅವರು ಜೂ.28ರಂದು ಪುತ್ತೂರು ನಗರಸಭೆ ವ್ಯಾಪ್ತಿಯ ಕೆಲವು ಕಡೆ ಭೇಟಿ ನೀಡಿ ಪರಿಶೀಲನೆ ಮಾಡಿ, ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಪುತ್ತೂರು ನಗರಸಭೆ ವ್ಯಾಪ್ತಿಯ ಬಪ್ಪಳಿಗೆ ಸಿಂಗಾಣಿ, ಪರ್ಲಡ್ಕ ಬೊಳ್ಳಾಣದಲ್ಲಿ ಧರೆ ಕುಸಿತ ಸ್ಥಳಗಳಿಗೆ ಮತ್ತು ಧರೆ ಕುಸಿಯುವ ಭೀತಿಯಲ್ಲಿರುವ ಸ್ಥಳಗಳಿಗೆ ಭೇಟಿ ನೀಡಿ ನಗರಸಭೆ ವ್ಯಾಪ್ತಿಯಲ್ಲಿ ಆಗಿರುವ ಅನಾಹುತಗಳ ಕುರಿತು ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಅವರಿಂದ ಮಾಹಿತಿ ಪಡೆದುಕೊಂಡರು.ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ವಿವಿಧ ಮಾಹಿತಿ ನೀಡಿದರು.ಈ ಸಂದರ್ಭ ಜಿಲ್ಲಾಧಿಕಾರಿಯವರು ಮಾತನಾಡಿ, ಕುಸಿಯುವ ಭೀತಿಯಲ್ಲಿರುವ ಧರೆಗಳಿಗೆ ತರ್ಪಾಲು ಹೊದಿಸಿ, ಅಗತ್ಯವಿದ್ದಲ್ಲಿ ಅಪಾಯಕಾರಿ ಮನೆಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ವ್ಯವಸ್ಥೆಯನ್ನೂ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಯಾವುದೇ ಘಟನೆಗಳು ನಡೆದಾಗ ತಕ್ಷಣ ಸ್ಪಂದಿಸುವ ಕೆಲಸ ಆಗಬೇಕೆಂದು ಸೂಚಿಸಿದರು.ತಹಶೀಲ್ದಾರ್ ಪುರಂದರ ಹೆಗ್ಡೆ, ತಾ.ಪಂ ಕಾರ್ಯನಿರ್ವಾಹಕ ಅಽಕಾರಿ ನವೀನ್ ಭಂಡಾರಿ ಹೆಚ್.,ನಗರಸಭೆ ಕಂದಾಯ ನಿರೀಕ್ಷಕ ರಾಜೇಶ್ ನಾಯ್ಕ್,ಪ್ರೊಬೇಷನರಿ ಎಸಿ ಜೊತೆಗಿದ್ದರು.


LEAVE A REPLY

Please enter your comment!
Please enter your name here